HEALTH TIPS

ಮುಳಿಂಜ ಶಾಲೆಯಲ್ಲಿ ನವೀಕೃತ ಯೂಟ್ಯೂಬ್ ಚಾನೆಲ್ ಉದ್ಘಾಟನೆ

             ಉಪ್ಪಳ ;ಶಾಲಾ ಚಟುವಟಿಕೆಗಳನ್ನು ಇ ಮಾಧ್ಯಮದ ಮೂಲಕ ಸಮಾಜಕ್ಕೆ ತಿಳಿಯಪಡಿಸುವ  ಉದ್ದೇಶದಿಂದ ಸರಕಾರಿ ಕಿರಿಯ ಪ್ರಾಥಮಿಕ  ಶಾಲೆ ಮುಳಿಂಜ ವಿದ್ಯಾ ಸಂಸ್ಥೆಯ  ಅಧಿಕೃತ  ಯೂಟ್ಯೂಬ್ ಚಾನೆಲ್ “ ಜಿ ಎಲ್ ಪಿ ಯಸ್ ಮುಳಿಂಜ “  ವನ್ನು  ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್  ವಾರ್ಡು ಸದಸ್ಯ ಶರೀಫ್ ಟಿ ಎಂ   ಇತ್ತೀಚೆಗೆ ಉದ್ಘಾಡಿಸಿದರು.

             ಉದ್ಘಾಟನಾ ಸಮಾರಂಭದಲ್ಲಿ ಸರ್ವ ಶಿಕ್ಷಾ ಕೇರಳ – ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ದೇಲಂಪಾಡಿ, ಮಂಜೇಶ್ವರ ಬಿ ಆರ್ ಸಿ ಯ ಪೆÇ್ರಜೆಕ್ಟ್ ಕಾರ್ಡಿನೇಟರ್ ವಿಜಯಕುಮಾರ್ ಪಾವಳ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಸಭಾ ಅಧ್ಯಕ್ಷತೆ ವಹಿಸಿದ್ದು ದಿನೇಶ   ಮುಳಿಂಜ ಉಪಸ್ಥಿತರಿದ್ದ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಚಾನಲ್ ನ ಬಗ್ಗೆ ಶಿಕ್ಷಕ ಅಬ್ದುಲ್ ಬಶೀರ್ ಸುಬ್ಬಯ್ಯ ಕಟ್ಟೆ ಸಭೆಗೆ ಮಾಹಿತಿ ನೀಡಿದರು. ಶಿಕ್ಷಕಿ ರೆಹಮತ್ ನಿರೂಪಿಸಿ, ಹಿರಿಯ ಶಿಕ್ಷಕಿ ಪುಷ್ಪಲತ ಸೋಂಕಲ್  ವಂದಿಸಿದರು.


 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries