ನವದೆಹಲಿ: ಭಾರತದ ಸೇನಾ ಸಮವಸ್ತ್ರ ಬದಲಾಗುತ್ತಿದೆ. ಭಾರತೀಯ ಸೇನೆಯು ಆರಾಮದಾಯಕ, ಹವಾಮಾನ ಸ್ನೇಹಿ ಮಾದರಿಯಲ್ಲಿ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಲಾಗಿದೆ.
ಹೊಸ ಸಮವಸ್ತ್ರವು ಆಲಿವ್ ಮತ್ತು ಮಣ್ಣಿನ ಬಣ್ಣಗಳು ಸೇರಿದಂತೆ ವಿವಿಧ ಬಣ್ಣಗಳ ಮಿಶ್ರಣವಾಗಿದೆ. ಆಯಕಟ್ಟಿನ ಪ್ರದೇಶಗಳು ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಗಳಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿಯ ಸಹಯೋಗದಲ್ಲಿ ವಿವಿಧ ದೇಶಗಳ ಸೇನೆಗಳ ಸಮವಸ್ತ್ರವನ್ನು ವಿಶ್ಲೇಷಿಸಿ ಹೊಸ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ.
ಸಮವಸ್ತ್ರ ಹೆಚ್ಚು ಆರಾಮದಾಯಕ ಮತ್ತು ಎಲ್ಲಾ ರೀತಿಯ ವಾತಾವರಣದಲ್ಲೂ ಧರಿಸಬಹುದು. ಹೊಸ ಸೇನಾ ಸಮವಸ್ತ್ರಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.