HEALTH TIPS

ಗುಹೆಯನ್ನು ದಾಟಿ ದೆಹಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಗುರುತಿಸಿಕೊಡಿದ್ದ ಬುಡಕಟ್ಟು ಪ್ರತಿಭೆ ಕಾಡಾನೆಗೆ ಬಲಿ!

           ಮಲಪ್ಪುರಂ: ಏಷ್ಯಾದ ಕಾಡಿನಲ್ಲಿ ಆಳವಾದ ಗುಹೆಗಳಲ್ಲಿ ವಾಸವಾಗಿರುವ ಏಕೈಕ ಬುಡಕಟ್ಟು ಜನಾಂಗ ಚೋಳ ಜನಾಂಗ. ಸಮಾಜದ ಒಡನಾಟದಿಂದ ಬಹುದೂರವಾಗಿದ್ದರೂ ಅಳಿವಿನ ಅಂಚಿನಲ್ಲಿರುವ ಅಪರೂಪದ ಬುಡಕಟ್ಟು ಸಂಸ್ಕೃತಿ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಕರಿಂಬುಜ ಮಥನ್.

         20 ವರ್ಷಗಳ ಹಿಂದೆ ಇವರ ಅಮೋಘ ಪ್ರತಿಭೆಯನ್ನು ಗುರುತಿಸಿ ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸುವಂತೆ ಅಂದಿನ ರಾಷ್ಟ್ರಪತಿಗಳು ಇವರಿಗೆ ಆಹ್ವಾನ ನೀಡಿದ್ದರು. ಅಲ್ಲಿಂದ ಸೆಲೆಬ್ರಿಟಿಯಾಗಿ ಮೆರೆದಿದ್ದರೂ ಗುಹೆಯಲ್ಲಿಯೇ ತಮ್ಮ ವಾಸವನ್ನು ಮುಂದುವರೆಸಿದ್ದ ಕರಿಂಬುಜ ಮಥನ್ ಕಾಡಾನೆಯ ದಾಳಿಗೆ ಬಲಿಯಾಗಿದ್ದಾರೆ.

             ಕೇರಳದ ಮಲಪ್ಪುರಂ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 70 ವರ್ಷದ ಕರಿಂಬುಜ ಅವರು ಇಂದು​​ ಪಡಿತರ ತರುವುದಕ್ಕಾಗಿ ಹೊರಗಡೆ ಹೋಗಿದ್ದರು. ಆ ಸಂದರ್ಭದಲ್ಲಿ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿದೆ. ಅದರಿಂದ ತಪ್ಪಿಸಿಕೊಳ್ಳಲು ಇವರಿಗೆ ಸಾಧ್ಯವೇ ಆಗಿಲ್ಲ. ಅದರ ದಾಳಿಗೆ ಇವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

         ವಯೋಸಹಜ ಕಾಯಿಲೆಯಿಂದ ಇವರು ಬಳಲುತ್ತಿದ್ದರು. ಆದರೂ ಬುಡಕಟ್ಟು ಜನಾಂಗದ ಉಳಿವಿಗೆ ಸಾಕಷ್ಟು ಶ್ರಮವಹಿಸಿ ಇವರು ದುಡಿಯುತ್ತಿದ್ದರು. ಸದ್ಯ ಈ ಚೋಳ ಬುಡಕಟ್ಟಿನವರು ಸುಮಾರು ನೂರು ಮಂದಿ ಇದ್ದು, ಇವರೆಲ್ಲರೂ ಅರಣ್ಯ ಪ್ರದೇಶದಲ್ಲೇ ವಾಸಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries