HEALTH TIPS

ಮನೆಗಳಲ್ಲಿಯೇ ಐಸೋಲೇಶನ್ ನಲ್ಲಿರುವವರಿಗೆ ಟೆಲಿಸಮಾಲೋಚನಾ ವ್ಯವಸ್ಥೆ: ರಾಜ್ಯ, ಕೇಂದ್ರಾಡಳಿತಗಳಿಗೆ ಕೇಂದ್ರ ಸೂಚನೆ

          ಮನೆಯಲ್ಲಿ ಐಸೋಲೇಶನ್‌ನಲ್ಲಿದ್ದುಕೊಂಡೇ ಚೇತರಿಸಿಕೊಳ್ಳುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಕಾಲದಲ್ಲಿ ಆ ರೋಗ್ಯಪಾಲನಾ ಸೇವೆಗಳನ್ನು ಒದಗಿಸಲು ದೂರಸಮಾಲೋಚನಾ (ಟೆಲಿಕನ್ಸಲ್ಟೇಶನ್) ಸೇವೆಗಳನ್ನು ವಿಸ್ತರಿಸುವ ಬಗ್ಗೆ ಗಮನಹರಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ರಾಜ್ಯಗಳಿಗೆ ತಿಳಿಸಿದ್ದಾರೆ.

            ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ, ಪಂಜಾಬ್,ಚಂಡೀಗಢ, ಉತ್ತರಾಖಂಡ, ಹರ್ಯಾಣ, ದಿಲ್ಲಿ, ಲಡಾಖ್ ಹಾಗೂ ಉತ್ತರಪ್ರದೇಶ ಸೇರಿದಂತೆ 9 ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋಕಾನ್ಫರೆನ್ಸ್ ಸಭೆ ನಡೆಸಿ ಸಂದರ್ಭದಲ್ಲಿ ಈ ಸಲಹೆೆ ನೀಡಿದ್ದಾರೆಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

            ಹೆಚ್ಚುವರಿ ಟೆಲಿಕಮ್ಯೂನಿಕೇಶನ್ ಕೇಂದ್ರಗಳನ್ನು ತೆರೆಯುವಂತೆಯೂ ಮಾಂಡವೀಯ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತಗಳನ್ನು ಆಗ್ರಹಿಸಿದ್ದಾರೆ. ಇದರಿಂದಾಗಿ ಸೋಂಕಿತರಿಗೆ ಜಿಲ್ಲಾ ಕೇಂದ್ರಗಳಲ್ಲಿ ನಿಯೋಜಿತರಾಗಿರುವ ತಜ್ಞರ ಸಲಹೆಯನ್ನು ಪಡೆದುಕೊಳ್ಳಲು ಸುಲಭವಾಗಲಿದೆ ಎಂದು ವರದಿ ಹೇಳಿದೆ.

            ಕೇಂದ್ರ ಸರಕಾರದ ಇ-ಸಂಜೀವಿನಿ ಟೆಲಿಮೆಡಿಸಿನ್ ವ್ಯವಸ್ಥೆಯು ಮೂಲಕ ಜನರು ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೇ ವೈದ್ಯಕೀಯ ಸಲಹೆಯನ್ನು ಪಡೆಯಬಹುದಾಗಿದ್ದು, ಈವರೆಗೆ 2.6 ಕೋಟಿಗೂ ಅಧಿಕ ಮಂದಿ ಫಲಾನುಭವಿಗಳಿಗೆ ಸೇವೆಯನ್ನು ಒದಗಿಸಿದೆ ಎಂದವರು ಹೇಳಿದರು.

"ಟೆಲಿಕನ್ಸಲ್ಟೇಶನ್ ವ್ಯವಸ್ಥೆಯು ವಿಶೇಷವಾಗಿ ಪ್ರಸಕ್ತ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿನ ದುರ್ಗಮ ಪ್ರದೇಶಗಳಿಗೆ ಅಗಾಧವಾದ ಪ್ರಾಮುಖ್ಯತೆಯನ್ನು ಪಡೆಯಲಿದೆ" ಎಂದು ಮಾಂಡವೀಯ ಗಮನಸೆಳೆದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries