ಪೆರ್ಲ: ಭಿನ್ನ ಸಾಮರ್ಥದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಎಣ್ಮಕಜೆ ಗ್ರಾಮ ಪಂಚಾಯತಿನ ಪೆರ್ಲ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಕೇರಳ ಸಮಗ್ರ ಶಿಕ್ಷಾ ಕಾಸರಗೋಡು ನೇತೃತ್ವದಲ್ಲಿ ಕುಂಬಳೆ ಉಪಜಿಲ್ಲಾ ಬಿಆರ್ ಸಿ ವತಿಯಿಂದ ಸ್ಪೇಶಲ್ ಕೇರ್ ಸೆಂಟರ್ ಪ್ರಾರಂಭಿಸಲಾಯಿತು.
ಮಂಜೇಶ್ವರದ ಶಾಸಕ ಎಕೆಎಂ ಆಶ್ರಫ್ ಕೇಂದ್ರವನ್ನು ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ವಿವಿಧ ವಾರ್ಡಿನ ಜನಪ್ರತಿನಿಧಿಗಳಾದ ರಮ್ಲ, ರಾಧಾಕೃಷ್ಣ ನಾಯಕ್, ಕುಸುಮಾವತಿ, ಎಸ್ ಎಸ್ ಕೆ ಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ನಾರಾಯಣ ಡಿ ಮೊದಲಾದವರು ಭಾಗವಹಿಸಿದ್ದರು. ಬಿಆರ್ ಸಿ ಬ್ಲಾಕ್ ಸಂಯೋಜಕ ಜಯರಾಮ್ ಜೆ. ಸ್ವಾಗತಿಸಿ, ಹರ್ಷಿಣಿ ವಂದಿಸಿದರು.