ಶ್ರದ್ದಾ ಕಪ್ರೆ ಮತ್ತು ಅರ್ಜುನ್ ಶುಕ್ಲಾ ಎಂಬಿಬ್ಬರು ಭಾರತೀಯ ವಿಜ್ಞಾನಿಗಳ ತಂಡ ಈ ಅಮೋಘ ಸಂಶೋಧನೆ ಮಾಡಿದೆ. ಮಧ್ಯಪ್ರದೇಶದ ಜಬಲ್ಪುರ ಸನಿಹ ಈ ಸರ್ಸಿಸ್ ಬ್ಲೂ ಚಿಟ್ಟೆ ಪ್ರಭೇದ ಪತ್ತೆಯಾಗಿದೆ.
ಪತ್ತೆಯಾಗಿರುವ ಅತ್ಯಪರೂಪದ ಈ ತಳಿಯ ಚಿಟ್ಟೆಯನ್ನು ಸಂಶೋಧಕರ ತಂಡ ಜತನದಿಂದ ಸಂರಕ್ಷಿಸಿದೆ. ಇದನ್ನು ಅಮೆರಿಕದ ಫ್ಲಾರಿಡಾ ಮ್ಯೂಸಿಯಂಗೆ ಕಳಿಸಿಕೊಡಲಾಗುವುದು. ಅಲ್ಲಿ ಸಂರಕ್ಷಿಸಿಡಲಾಗಿರುವ ಸರ್ಸಿಸ್ ಬ್ಲೂ ಚಿಟ್ಟೆಗೂ ಭಾರತದಲ್ಲಿ ಪತ್ತೆಯಾಗಿರುವ ಅದೇ ತಳಿಯ ಚಿಟ್ಟೆಗೂ ಇರುವ ಸ್ವಾಮ್ಯತೆ ಕುರಿತು ಅಧ್ಯಯನ ನಡೆಯಲಿದೆ.