ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( DRDO) ಮಂಗಳವಾರ ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.
ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಟ್ಯಾಂಕ್ ವಿರೋಧಿ ಕ್ಷಿಪಣಿಯನ್ನು ಮ್ಯಾನ್-ಪೋರ್ಟಬಲ್ ಲಾಂಚರ್‌ನಿಂದ ಇಂದು ಉಡಾವಣೆ ಮಾಡಲಾಯಿತು.
ಈ ಯಶಸ್ವಿ ಪ್ರಯೋಗದ ಬಗ್ಗೆ ರಕ್ಷಣಾ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ. ಈ ಕ್ಷಿಪಣಿ ಭಾರತೀಯ ಸೇನೆಯ ಪದಾತಿದಳ ಮತ್ತು ಪ್ಯಾರಾಚೂಟ್ ವಿಶೇಷ ಪಡೆಗಳಿಗೆ ನೀಡಲಾಗುತ್ತದೆ ಎಂದು ಡಿಫೆನ್ಸ್ ಮಿನಿಸ್ಟ್ರಿ ತಿಳಿಸಿದೆ.
ಇದು ಪೋರ್ಟಬಲ್ ಕ್ಷಿಪಣಿಯಾಗಿದ್ದು ಯೋಧರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಆಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಅನ್ನು ಟ್ರೈಪಾಡ್ ಬಳಸಿ ಗರಿಷ್ಠ 2.5 ಕಿಮೀ ವ್ಯಾಪ್ತಿಯವರೆಗೆ ಉಡಾವಣೆ ಮಾಡಬಹುದಾಗಿದೆ.
ಈ ಬಗ್ಗೆ ಡಿಆರ್‌ಡಿಒ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವದ್ಧಿಪಡಿಸಲಾಗಿರುವ ಟ್ಯಾಂಕ್ ವಿರೋಧಿ ಕ್ಷಿಪಣಿಯನ್ನು ಉಡಾವಣೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.