ಬದಿಯಡ್ಕ: ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಣೆಯನ್ನು ನೀಡಲು ಹಿಂದೇಟು ಹಾಕಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ನೇತೃತ್ವದಲ್ಲಿ ಗುರುವಾರ ರಾತ್ರಿ ಬದಿಯಡ್ಕದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾ ನೇತಾರ ಎಂ.ಸುಧಾಮ ಗೋಸಾಡ ಮಾತನಾಡಿ ಹಿಂದಿನ ಕಾಲದಿಂದಲೇ ಕಾಂಗ್ರೆಸ್ ಸರ್ಕಾರಗಳು ಅನೇಕ ಭಾರತೀಯ ನೇತಾರರಿಗೆ ಭದ್ರತೆಯನ್ನು ನೀಡದೆ ಅವರ ಸಾವು ಉಂಟಾಗಿದೆ. ಇದೇ ಚಾಳಿಯನ್ನು ಇಂದು ಕೂಡಾ ಮುಂದುವರಿಸಿಕೊಂಡು ಹೋಗುತ್ತಿರುವ ಕೆಟ್ಟ ಕಾಂಗ್ರೆಸ್ ಪಕ್ಷವು ನಿರ್ನಾಮವಾಗಲಿದೆ ಎಂದರು. ಮುಖಂಡರಾದ ಗೋಪಾಲಕೃಷ್ಣ ಮುಂಡೋಳುಮೂಲೆ, ನರಸಿಂಹ ಭಟ್, ವಿಜಯಸಾಯಿ, ಹರೀಶ್ ಗೋಸಾಡ, ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ, ಎಂ.ನಾರಾಯಣ ಭಟ್, ಕೇಶವ ಶರ್ಮ ಹಾಗೂ ಪರಿವಾರ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.