ಉಪ್ಪಳ: ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಇಂದು ಬೆಳಿಗ್ಗೆ(ಜ.22) 7 ಕ್ಕೆ ಹಣಪತಿ ಹವನದೊಂದಿಗೆ ಆರಂಭಗೊಳ್ಳಲಿದೆ. ಸಂಜೆ 3ಕ್ಕೆ ದೈವಗಳ ಭಂಡಾರ ಏರಿ, 4 ಕ್ಕೆ ಗುಳಿಗ ದೈವದ ನೇಮ ಜರಗಲಿದೆ. ರಾತ್ರಿ 7 ಕ್ಕೆ ಸಂಕೊಳಿಗೆ ದೈವದ ನೇಮ, ರಾತ್ರಿ 12 ರಿಂದ ಮುಂಹಜಾನೆಯ ವರೆಗೆ ಶ್ರೀಮಹಾಂಕಾಳಿ ದೈವ ನೇಮೋತ್ಸವ ನಡೆಯಲಿದೆ. ಜ.23 ರಂದು ಸಂಜೆ 7ಕ್ಕೆ ಕೊರಗತನಿಯ, ಕೊರಪ್ಪೋಳು ದೈವಗಳ ನೇಮ, ರಾತ್ರಿ 9 ರಿಂದ ಮುಂಜಾನೆ ವರೆಗೆ ಬ್ರಹ್ಮಶ್ರೀ ಮೊಗೇರ ದೈವಗಳ ಹಾಗೂ ತನ್ನಿಮಾನಿಗ ದೈವದ ನೇಮೋತ್ಸವ ನಡೆಯಲಿದೆ.