ಕಾಸರಗೋಡು: ಕಾಞಂಗಾಡ್ ಬ್ಲಾಕ್ ಡೈರಿ ರೈತರ2021-22 ಸಮಾವೇಶ ಹೈನುಗಾರಿಕೆ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಅಂಬಂಗಾಡ್ ಡೈರಿ ಸಹಕಾರಿ ಸಂಘದ ಸಹಕಾರದೊಂದಿಗೆ ನಿನ್ನೆ ನಡೆಯಿತು.
ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬ್ಲಾಕ್‍ನ ಉತ್ತಮ ಹೈನುಗಾರರನ್ನು ಶಾಸಕರು ಸನ್ಮಾನಿಸಿದರು. ಡೈರಿ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಜೀಜಾ ಸಿ ಕೃಷ್ಣನ್ ಮುಖ್ಯ ಭಾಷಣ ಮಾಡಿದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ ಮಣಿಕಂಠನ್, ಪಳ್ಳಿಕ್ಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ ಕುಮಾರನ್, ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ ಲಕ್ಷ್ಮಿ, ಅಂಬಂಗಾಡ್ ಡೈರಿ ಗ್ರೂಪ್ ನ ಉತ್ತಮ ರೈತರನ್ನು ಸನ್ಮಾನಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ ಅವರು ಆತಿಥೇಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾಞಂಗಾಡು ಬ್ಲಾಕ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಅಬ್ದುಲ್ ರಹಿಮಾನ್, ಬ್ಲಾಕ್ ಸದಸ್ಯೆ ವಿ ಗೀತಾ, ಪಳ್ಳಿಕ್ಕೆರೆ ಗ್ರಾಮ ಪಂಚಾಯತ್ ಸದಸ್ಯೆ ಟಿ ಶೋಭನಾ, ಕಾಞಂಗಾಡ್ ಬಿಡಿಓ ಸಂಧ್ಯಾದೇವಿ, ಡಿಎಫ್ ಐ ರೆಜಿಮಾ, ಪಿ.ವಿ. ಶಾಜಿ, ಪಿ.ಎಂ.ಬಾಲನ್, ಕುದ್ರೆಕ್ಕೋಡ್ಲು ಕೃಷ್ಣ, ವಿ.ವಿ.ಗಂಗಾಧರನ್, ಡೈರಿ ಗ್ರೂಪ್ ಅಧ್ಯಕ್ಷ ಎಂ.ಕುಂಜಂಬಾಡಿ, ಪಿ.ಭಾಸ್ಕರನ್ ನಾಯರ್, ಡೈರಿ ಗ್ರೂಪ್ ಕಾರ್ಯದರ್ಶಿಗಳಾದ ಪಿ.ಆರ್.ಬಾಲಕೃಷ್ಣನ್ ಮತ್ತು ಗೋಪಾಲಕೃಷ್ಣನ್ ಕರಿಚೇರಿ, ಲತಾ ಎನ್ ಮಾತನಾಡಿದರು. ಅಂಬಂಗಾಡ್ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಕೆ.ಕುಂಞÂ ರಾಮನ್ ಸ್ವಾಗತಿಸಿ, ಹೈನುಗಾರಿಕೆ ಅಭಿವೃದ್ದಿ ಅಧಿಕಾರಿ ವಿ.ಮನೋಹರನ್ ವಂದಿಸಿದರು.