ಪತ್ತನಂತಿಟ್ಟ: ಶಬರಿಮಲೆಯಲ್ಲಿ ಲಕ್ಷಗಟ್ಟಲೆ ಹಣದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಶಬರಿಮಲೆಗೆ ಭೇಟಿ ನೀಡಲು ಆಗಮಿಸಿ ದೇವಸ್ವಂ ಅತಿಥಿ ಗೃಹದಲ್ಲಿ ತಂಗಿದ್ದ ವಿಐಪಿಗಳಿಗೆ ಆಹಾರದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ಸ್ವಂತ ಖರ್ಚಿನಲ್ಲಿ ಊಟ ಮಾಡಿದರೂ ವಿಐಪಿಗಳಿಗೆ ದೇವಸ್ವಂ ಖರ್ಚಿನಲ್ಲೇ ಊಟ ಹಾಕಲಾಗಿದೆ ಎಂದು ರಿಜಿಸ್ಟರ್ ನಲ್ಲಿ ಸೇರಿಸಿ ಹಣ ಲಪಟಾಯಿಸಲಾಗಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೇರಿದಂತೆ ಹಲವು ವಿಐಪಿಗಳ ಹೆಸರಲ್ಲಿ ಭ್ರಷ್ಟಾಚಾರ ನಡೆಸಲಾಗಿರುವುದು ಪತ್ತೆಯಾಗಿದೆ.
ಶಬರಿಮಲೆಯಲ್ಲಿ, ದೇವಸ್ವಂ ಅತಿಥಿ ಗೃಹಗಳು ದೇವಸ್ವಂ ಮಂಡಳಿಯ ಅತಿಥಿಗಳಿಗೆ ವಸತಿ ಕಲ್ಪಿಸುತ್ತವೆ. ದೇವಸ್ವಂ ಕಚೇರಿ ಕಾಂಪ್ಲೆಕ್ಸ್ ಅತಿಥಿ ಗೃಹದಲ್ಲಿ ತಂಗಿರುವ ವಿಐಪಿಗಳ ಹೆಸರಿನಲ್ಲಿ ಲಕ್ಷಾಂತರ ರೂ. ಈಡುಮಾಡಲಾಗುತ್ತದೆ. ಅವರಿಗೆ ದೇವಸ್ವಂ ವೆಚ್ಚದಲ್ಲಿ ಅನ್ನ ನೀಡಿರುವುದು ರಿಜಿಸ್ಟರ್‍ನಲ್ಲಿ ದಾಖಲಾಗಿದೆ. ಆದರೆ ವಿಐಪಿಗಳೆಲ್ಲರೂ ತಮ್ಮ ಸ್ವಂತ ಖರ್ಚಿನಲ್ಲಿ ಊಟ ಮಾಡಿರುವರು.
ಇಡುಕ್ಕಿ ಎಸ್ಪಿ ಕರುಪ್ಪಸ್ವಾಮಿ, ಶಬರಿಮಲೆ ಉಸ್ತುವಾರಿ ಐಎಎಸ್ ಅಧಿಕಾರಿ ಎಡಿಎಂ ಅರ್ಜುನ್ ಪಾಂಡ್ಯ, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ, ಶಬರಿಮಲೆ ವಿಶೇಷ ಆಯುಕ್ತ ಎಂ.ಮನೋಜ್ ಮೊದಲಾದವರ ಹೆಸರಲ್ಲಿ ವಂಚನೆ ನಡೆಸಲಾಗಿದೆ. ರಿಜಿಸ್ಟರ್ ಪ್ರಕಾರ, ಕೊಲ್ಲಂ ಜಿಲ್ಲಾ ನ್ಯಾಯಾಧೀಶರು ಶಬರಿಮಲೆಯಿಂದ ವಿಶೇಷ ಆಯುಕ್ತರ ಸಿಟ್ಟಿಂಗ್‍ಗೆ ಹೊರಟ ದಿನಗಳಲ್ಲೂ ಊಟ ಮಾಡಿದ್ದರು.
ಇಡುಕ್ಕಿ ಎಸ್ಪಿ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಅಪರಾಧ ವಿಭಾಗದ ಎಡಿಜಿಪಿಗೆ ದೂರು ಸಲ್ಲಿಸಿದ್ದರು. ದೇವಸ್ವಂ ಅತಿಥಿಗೃಹದಲ್ಲಿ ಅತಿಥಿಗಳ ಊಟದ ವೆಚ್ಚವನ್ನು ವರ್ಷಗಟ್ಟಲೆ ಲೆಕ್ಕ ಹಾಕಿಲ್ಲ. ಇದಕ್ಕಾಗಿ ಲಕ್ಷಾಂತರ ಕೋಟಿ ರೂ.ಭರಿಸಿರುವುದು ಇದೀಗ ಪತ್ತೆಯಾಗಿದೆ.
ಶಬರಿಮಲೆ ಆಡಳಿತಾಧಿಕಾರಿಗೆ ದೇವಸ್ವಂ ಮೆಸ್ ಉಸ್ತುವಾರಿ ವಹಿಸಲಾಗಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಮೆಸ್‍ನ ರಿಜಿಸ್ಟರ್ ನ್ನು ಪರಿಶೀಲಿಸುವಂತೆ ಹೈಕೋರ್ಟ್‍ನ ಸ್ಥಳೀಯ ನಿಧಿ ಲೆಕ್ಕ ಪರಿಶೋಧನಾ ವಿಭಾಗ ತಿಳಿಸಿದೆ.