ಕುಂಬಳೆ: ಪ್ರಸಿದ್ದ ಲೇಖಕಿ, ಕಥೆಗಾರ್ತಿ ಸ್ನೇಹಲತಾ ದಿವಾಕರ ಅವರ ನೂತನ ಕೃತಿ "ಆಮೆ" ಕಥಾ ಸಂಕಲನದ ಬಿಡುಗಡೆ ಇಂದು(ಜ. 17) ಕುಂಬಳೆ ಮಾಧವ ಪೈ ಸ್ಮಾರಕ ಸಭಾ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ಕೈರಳಿ ಪ್ರಕಾಶನದ ಗೌರವ ಸಲಹೆಗಾರ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಜೆ ಕೃತಿ ಬಿಡುಗಡೆಗೊಳಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕೃತಿ ಪರಿಚಯ ನೀಡುವರು. ಕರ್ನಾಟಕ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ, ಕುಂಬಳೆ ಗ್ರಾ.ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಪ್ರಮೀಳಾ ಮಾಧವ್, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕಾಸರಗೋಡು ಥಿಯೇಟರಿಕ್ ಸೊಸೈಟಿ ಕೋಶಾಧಿಕಾರಿ ನ್ಯಾಯವಾದಿ ಟಿ.ವಿ.ಗಂಗಾಧರನ್ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿರುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು, ಸಾಮಾಜಿಕ ಮುಖಂಡ ಕೋಳಾರು ಸತೀಶ್ಚಂದ್ರ ಭಂಡಾರಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಇದರ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್, ಕನ್ನಡ ಪತ್ರಕರ್ತರ ಕಾಸರಗೋಡು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಉಪಸ್ಥಿತರಿರುವರು. ಗಡಿನಾಡಿನ ಪ್ರಸಿದ್ದ ಪ್ರಕಟಣಾ ಸಂಸ್ಥೆಯಾದ ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆಯ 21ನೇ ಕೃತಿಯಾಗಿ ಆಮೆ ಪ್ರಕಟಗೊಳ್ಳುತ್ತಿದೆ.