ಕಾಸರಗೋಡು: ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವೈಭವ್ ಸಕ್ಸೇನಾ ಅವರನ್ನು ನೇಮಿಸಲಾಗಿದೆ.
ಕಾಸರಗೋಡು ಎಸ್.ಪಿ ಆಗಿರುವ ಪಿ.ಬಿ ರಾಜೀವ್ ಅವರನ್ನು ಕಣ್ಣೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ. ಪ್ರಸಕ್ತ ತಿರುವನಂತಪುರ ನಗರ ಪೊಲೀಸ್ ಆಯುಕ್ತರಾಗಿರುವ ವೈಭವ್ ಸಕ್ಸೇನಾ ಅವರು 2016ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಾನಂದವಾಡಿ ಎ.ಎಸ್.ಪಿ, ಕೆ.ಎ.ಪಿ ಬೆಟಾಲಿಯನ್ ಕಮಾಂಡೆಂಟ್ ಹಾಗೂ ಪೊಲೀಸ್ ಹೆಡ್‍ಕ್ವಾರ್ಟರ್ಸ್‍ನಲ್ಲಿ ಹೆಚ್ಚುವರಿ ಇನ್ಸ್‍ಪೆಕ್ಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.