ಕಾಸರಗೋಡು: ಪಾಲಿಯೇಟಿವ್ ಕೇರ್ ದಿನಾಚರಣೆ ಅಂಗವಾಗಿ ಜಿಲ್ಲೆಯ ಅರ್ಬುದ ರೋಗಿಗಳಿಗಾಗಿ ಸ್ನೇಹ ಸನ್ಮಾನ ವಿತರಣೆಯ ಉದ್ಘಾಟನೆ ಮತ್ತು ಸ್ನೇಹಸನ್ಮಾನ ಒಳಗೊಂಡ ವಾಹನದ ಫ್ಲ್ಯಾಗ್‍ಆಫ್ ಸಮಾರಂಭ ಜಿಲ್ಲಾಆಸ್ಪತ್ರೆ ವಠಾರದಲ್ಲಿ ಜರುಗಿತು.
ಜಿಪಂ ಅಧ್ಯಕ್ಷೆ ಬೇಬಿ ಬಾಳಕೃಷ್ಣನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಸಹಾಯಕ ವೈದ್ಯಾಧಿಕಾರಿ(ಆರೋಗ್ಯ)ಡಾ, ಮೋಹನನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ ಮುಖ್ಯ ಭಾಷಣ ಮಾಡಿದರು. ಕಾಞಂಗಾಡು ಡಿವೈಎಸ್‍ಪಿ ಡಾ. ಪಿ. ಬಾಲಕೃಷ್ಣನ್ ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾಸ್ಪತ್ರೆ ಡೆಪುಸೂಪರಿಂಟೆಂಡೆಂಟ್ ಡಾ. ಚಂದ್ರಮೋಹನನ್ ಇ.ಪಿ, ಜಿಲ್ಲಾಸ್ಪತ್ರೆ ಆಂಕಲಜಿಸ್ಟ್ ರಾಜು ಮ್ಯಾಥ್ಯೂ ಸಿರಿಯಕ್, ಆರ್.ಎಂ.ಓ ಡಾ, ಶ್ರೀಜಿತ್ ಮೋಹನ್, ಪಲಿಯೇಟಿವ್ ಕೇರ್ ವೈದ್ಯಾಧಿಕಾರಿ ಡಾ. ಸ್ವಾತಿ ಕೆ. ಕುಮಾರ್, ದಾದಿ ದಾಕ್ಷಾಯಿಣಿ, ಮುರಳೀಧರನ್ ಪಿ, ಕಮಲ್ ಕೆ. ಜೋಸ್ ಉಪಸ್ಥಿತರಿದ್ದರು.
ಜಿಲ್ಲಾ ಎಜುಕಶನ್ ಏಂಡ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಜಿಜಿ ಶೇಖರ್ ವಂದಿಸಿದರು.