ಬದಿಯಡ್ಕ: ವೇದಬ್ರಹ್ಮ ಶ್ರೀ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ 80ನೇ ವರ್ಷದ ಸಂದರ್ಭ ಅವರ ಶಿಷ್ಯವೃಂದದವರ ನೇತೃತ್ವದಲ್ಲಿ ನೀರ್ಚಾಲು ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ವೇದಪಾಠಶಾಲೆಯಲ್ಲಿ ಕಳೆದ ಗುರುವಾರ ಆರಂಭವಾದ ಶ್ರೀಕೃಷ್ಣ ಯುಜುರ್ವೇದ ತೈತ್ತರೀಯ ಶಾಖಾಮಂತ್ರಸ್ವಾಹಾಕಾರ ಯಜ್ಞ ನಾಳೆ ಬೆಳಗ್ಗೆ ಜ.12ರಂದು ಪೂರ್ಣಾಹುತಿಗೊಳ್ಳಲಿದೆ. ಯಜ್ಞದ ಪ್ರಧಾನ ಆಚಾರ್ಯ ಅಮೈ ಅನಂತಕೃಷ್ಣ ಭಟ್ಟರೊಂದಿಗೆ ಘನ ವಿದ್ವಾಂಸರು ಪಾಲ್ಗೊಂಡು ನಡೆಯುತ್ತಿರುವ ಯಜ್ಞದ ಸಂದಭರ್Àದಲ್ಲಿ ಸೋಮವಾರ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಭೇಟಿಯನ್ನಿತ್ತರು. ತಮ್ಮ ಶಿಷ್ಯವೃಂದದವರೊಂದಿಗೆ ಆಗಮಿಸಿ ಅವರನ್ನು ವೇದ ಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ ದಂಪತಿಗಳು ಪೂರ್ಣಕುಂಭ ಸ್ವಾಗತ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ರವೀಶ ತಂತ್ರಿ ಕುಂಟಾರು, ಜಯದೇವ ಖಂಡಿಗೆ, ಮಹೇಶ್ ವಳಕ್ಕುಂಜ, ಗಣೇಶ ಕೃಷ್ಣ ಅಳಕ್ಕೆ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.