ಆಲಪ್ಪುಳ: ಸಿಪಿಎಂನ ಜಿಲ್ಲಾ ಸಮಾವೇಶಗಳು ಕೊರೋನಾ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಟೀಕಿಸಿದ ಬಳಿಕ ಆಲಪ್ಪುಳದಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನು ಮುಂದೂಡಲಾಗಿದೆ. ಕೊರೋನಾ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಆಲಪ್ಪುಳ ಜಿಲ್ಲಾ ಕಾರ್ಯದರ್ಶಿ ಆರ್ ನಾಸರ್ ಹೇಳಿದ್ದಾರೆ.
ಸಿಪಿಎಂ ನಾಯಕತ್ವವು ಸಮಾವೇಶಗಳ ವಿರುದ್ಧ ಟೀಕೆಗಳಿಗೆ ಬಗ್ಗುವುದಿಲ್ಲ ಎಂದು ಹಠಮಾಡಿತ್ತು. ಇದರೊಂದಿಗೆ ಕಾಸರಗೋಡು ಸಮ್ಮೇಳನದ ವಿರುದ್ಧ ದೂರು ದಾಖಲಾಯಿತು. ಹೈಕೋರ್ಟ್ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಸಮಾವೇಶವನ್ನು ಒಂದೇ ದಿನದಲ್ಲಿ ಮುಕ್ತಾಯಗೊಳಿಸಲಾಯಿತು. ತ್ರಿಶೂರ್‌ನ ಕಾರ್ಯಕ್ರಮಗಳನ್ನೂ ಮೊಟಕುಗೊಳಿಸಲಾಯಿತು.
ಪಕ್ಷದ ಸಮಾವೇಶ ನಡೆಸಲು ಜಿಲ್ಲಾ ಮಟ್ಟದಲ್ಲಿ ಕೊರೊನಾ ನಿಯಂತ್ರಣದಲ್ಲೂ ಬದಲಾವಣೆ ಮಾಡಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ 50 ಮಂದಿ ಮಾತ್ರ ಭಾಗವಹಿಸುತ್ತಾರೆ. ಹಾಗಿದ್ದರೆ ರಾಜಕೀಯ ಪಕ್ಷಗಳ ಸಮಾವೇಶಗಳ ವಿಶೇಷತೆ ಏನು ಎಂದು ನ್ಯಾಯಾಲಯ ಕೇಳಿದೆ.