ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)2022-2023ನೇ ಸಾಲಿನ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಭರತನ್ ಎನ್.ಎ ಅವರನ್ನು ಆಯ್ಕೆ ಮಾಡಲಾಗಿದೆ. ಸಂಜೀವ ರೈ, ವಿಜಯನ್ ಕೆ.ನಾಯರ್ ಉಪಾಧ್ಯಕ್ಷರು, ವಾಸು ಎ ಕಾರ್ಯದರ್ಶಿ, ಚಂದ್ರಶೇಖರ, ರಂಜಿತ್ ಐಮ್ಯಾಜಿಕ್ ಜತೆ ಕಾರ್ಯದರ್ಶಿಗಳು, ವೇಣು ವಿ.ವಿ ಕೋಶಾಧಿಕಾರಿ ಹಾಗೂ ಪಿ.ಆರ್.ಓ ಆಗಿ ದಿನೇಶ್ ಇನ್‍ಸೈಟ್ ಅವರನ್ನು ಆಯ್ಕೆ ಮಾಡಲಾಗಿದೆ.