ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಟ್ವಿಟರ್‌ಗೆ ಪತ್ರ ಬರೆದು ತಮ್ಮ ಟ್ವಿಟ್ಟರ್ ಖಾತೆಯನ್ನು ಹತ್ತಿಕ್ಕಲು ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟ್ಟರ್ ನಲ್ಲಿ ತಮ್ಮ ಧ್ವನಿಯನ್ನು ಅಡಗಿಸುವ ಸಲುವಾಗಿ ತಮ್ಮ ಟ್ವಿಟರ್ ಫಾಲೋವರ್ ಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಟ್ವಿಟ್ಟರ್ ನಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇದು ವಿರೋಧಿಗಳ ಒಳಸಂಚು ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋವನ್ನು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬಿಜೆಪಿ ಆಕ್ಷೇಪಿಸಿತ್ತು. ನಂತರ ರಾಹುಲ್ ಗಾಂಧಿ ಅವರನ್ನು ಟ್ವಿಟ್ಟರ್ ಒಂದು ವಾರ ಬ್ಲಾಕ್ ಮಾಡಿತ್ತು. ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಿದ ನಂತರ ಟ್ವಿಟ್ಟರ್ ನಿರ್ಬಂಧವನ್ನು ಹಿಂಪಡೆಯಲಾಗಿತ್ತು.
ಟ್ವಿಟ್ಟರ್ ಇಂಡಿಯಾದ ಮುಖ್ಯಸ್ಥರು ಸ್ಪಷ್ಟನೆ ನಡೆದಿದ್ದು ರಾಹುಲ್ ಗಾಂಧಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಫಾಲೋವರ್ಸ್ ಸಂಖ್ಯೆ ನಿಯಂತ್ರಿಸುವ ವಿಚಾರದಲ್ಲಿ ಯಾವುದೇ ಬಗೆಯ ಮೋಸ ನಡೆಯಲು ಸಾಧ್ಯವಿಲ್ಲ ಎಂಡು ಅವರು ಸ್ಪಷ್ತನೆ ನೀಡಿದ್ದಾರೆ.