ಕೋಝಿಕ್ಕೋಡ್: ಚಿಲ್ಡ್ರನ್ಸ್ ಹೋಂ ನಿಂದ ಬಾಲಕಿಯರು ನಾಪತ್ತೆಯಾಗಿದ್ದಾರೆ. ಆರು ಹುಡುಗಿಯರು ನಾಪತ್ತೆಯಾಗಿದ್ದಾರೆ. ಮಕ್ಕಳು ಕೋಯಿಕ್ಕೋಡ್ ವೆಲ್ಲಿಮಡುಕುನ್ನು ಚಿಲ್ಡ್ರನ್ಸ್ ಹೋಂ ನಿಂದ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಘಟನೆ ಕುರಿತು ಮೆಡಿಕಲ್ ಕಾಲೇಜು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾಣೆಯಾದವರಲ್ಲಿ ಸಹೋದರಿಯರು ಸೇರಿದ್ದಾರೆ. ಎಲ್ಲರೂ ಕೋಝಿಕ್ಕೋಡ್ ಜಿಲ್ಲೆಯವರು.
ಬುಧವಾರ ಸಂಜೆ ಮಕ್ಕಳು ನಾಪತ್ತೆಯಾಗಿರುವುದು ದೃಢಪಟ್ಟಿದೆ. ಎಲ್ಲರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸಂಚು ರೂಪಿಸಿ ಮಕ್ಕಳು ಪರಾರಿಯಾಗಿದ್ದಾರೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಸದ್ಯ ಮಕ್ಕಳ ಹುಡುಕಾಟ ಪ್ರಗತಿಯಲ್ಲಿದೆ.