ಕಾಸರಗೋಡು: ಆಲ್ ಇಂಡಿಯ ಇನ್‍ಸ್ಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಎಐಐಎಂಎಸ್)ಕಾಸರಗೋಡಿನಲ್ಲಿ ಸ್ಥಾಪಸಿವಂತೆ ಆಗ್ರಹಿಸಿ ನಿರಾಹಾರ ಧರಣಿ ಗುರುವಾರ ಕಾಸರಗೋಡಿನಲ್ಲಿ ಆರಂಭಗೊಂಡಿತು.
ಏಮ್ಸ್ ಪ್ರಸ್ತಾಪದಲ್ಲಿ ಕಾಸರಗೋಡು ಜಿಲ್ಲೆಯ ಹೆಸರನ್ನೂ ಸೇರಿಸವಂತೆ ಆಗ್ರಹಿಸಿ ಏಮ್ಸ್ ಜನಕೀಯ ಒಕ್ಕೂಟ ವತಿಯಿಂದ ಸತ್ಯಾಗ್ರಹ ಆಯೋಜಿಸಲಾಗಿತ್ತು. ಸಾಮೂಹಿಕವಾಗಿ ಬಲೂನ್ ಹಾರಿಬಿಡುವ ಮೂಲಕ ಅಬಿರ್ಧಿಷ್ಟಕಾಲ ನಿರಾಹಾರ ಸತ್ಯಾಗ್ರಹ ಆರಂಭಿಸಲಾಯಿತು. ನಾಸರ್ ಚೆರ್ಕಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಖಾದರ್ ಮಾಂಗಾಡ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಅಂಬಲತ್ತರ ಕುಞÂಕೃಷ್ಣನ್, ಪ್ರೊ. ಸುರೇಂದ್ರನಾಥ್, ಅರಿಬೈಲ್ ಗೋಪಾಲ ಶೆಟ್ಟಿ, ಗಣೇಶನ್ ಅರಮಂಗಾನ, ಸುಬೈರ್ ಪಡ್ಪು, ಪ್ರಮೋದ್ ಕೈಕಂಬ, ಶೆರೀಫ್ ಬೆಜ್ಜಂಗಳ, ಹಸೈನಾರ್, ರಾಮ್ಜಿ ತನ್ನೋಟ್, ಚಂದ್ರನ್ ಮುಂತಾದವರು ಉಪಸ್ಥಿತರಿದ್ದರು.