ಕಾಸರಗೋಡು: ಮಾರಣಾಂತಿಕ ಮಾದಕ ವಸ್ತುಗಳೊಂದಿಗೆ ಕಾಸರಗೋಡಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಷಹಜಹಾನ್ ಮತ್ತು ಒಬೈದ್ ಅವರನ್ನು ಬಂಧಿಸಲಾಯಿತು. ಕಾಸರಗೋಡಿನಲ್ಲಿ ವಿಶೇಷ ಅಭಿಯಾನದ ಅಂಗವಾಗಿ ನಡೆಸಿದ ಶೋಧದ ವೇಳೆ ಇವರನ್ನು ಬಂಧಿಸಲಾಗಿದೆ.
ಮೇಲ್ಪರಂಬು ಪೆÇಲೀಸ್ ಠಾಣಾ ವ್ಯಾಪ್ತಿಯ ಕೀಜೂರ್ ಮತ್ತು ಚೆಮ್ಮನಾಡಿನಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದೆ. ಆರೋಪಿಯಿಂದ 243.38 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಡ್ರಗ್ಸ್ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಡ್ರಗ್ಸ್ ಸಾಗಾಟ ಮತ್ತು ವಿತರಣೆ ಜೋರಾಗಿದೆ. ಕಳೆದ 20 ದಿನಗಳಲ್ಲಿ ಪೋಲೀಸರು 265.86 ಗ್ರಾಂ ಎಂಡಿಎಂಎ ಮತ್ತು 18.18 ಕಿಲೋಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ 66 ಪ್ರಕರಣಗಳು ದಾಖಲಾಗಿದ್ದು, 93 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯ ಪೋಲೀಸ್ ಮುಖ್ಯಸ್ಥರ ಸೂಚನೆ ಮೇರೆಗೆ ಡ್ರಗ್ಸ್ ಮಾಫಿಯಾ ವಿರುದ್ಧ ಪೋಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕಾಗಿ ವಿಶೇಷ ಕ್ರಿಯಾ ಪಡೆ ರಚಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.