HEALTH TIPS

ಮಕ್ಕಳಿಗೆ ಮೊಬೈಲ್‌ ಕೊಡುವಾಗ ಹೀಗೆ ಮಾಡಿದರೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲ್ಲ

       ಈಗ ಯಾವ ಮಕ್ಕಳನ್ನೇ ನೋಡಿ ಮೊಬೈಲ್‌ ಕಂಡ್ರೆ ಆಕರ್ಷಣೆ, ಅದು ಬೇಕೆಂದು ಗಲಾಟೆ ಮಾಡುತ್ತಾರೆ. ಪೋಷಕರು ಮಗುವಿನ ಗಲಾಟೆ ಕಡಿಮೆಯಾಗಲು ಮೊಬೈಲ್‌ ಕೊಟ್ಟು ಬಿಟುತ್ತಾರೆ. ಅಲ್ಲದೆ ಕೋವಿಡ್ 19 ಬಂದ ಮೇಲೆ ಪ್ರೀ ಕೆಜಿ ಹೋಗೋ ಮಕ್ಕಳಿಗೂ ಆನ್‌ಲೈನ್‌ ಕ್ಲಾಸ್ ಅಂತ ಬಂದ ಮೇಲೆ ಪೋಷಕರು ಮಕ್ಕಳುಗೆ ಲ್ಯಾಪ್‌ಟ್ಯಾಪ್‌ ಅಥವಾ ಮೊಬೈಲ್‌ ನೀಡಬೇಕಾದ ಪರಿಸ್ಥಿತಿ ಬಂದಿದೆ.

       ಮಗುವಿಗೆ ಒಂದು ವರ್ಷ ತುಂಬುವುದು ಬೇಡ ಮೊಬೈಲ್‌ ಬೇಕೆಂದು ಕೇಳುತ್ತದೆ, ಮೊಬೈಲ್‌ ಕೊಟ್ಟರೆ ಅದು ಕೈಯಲ್ಲಿರುವಷ್ಟೂ ಹೊತ್ತು ಯಾವ ಗಲಾಟೆಯೂ ಇಲ್ಲ, ರಂಪಾಟವೂ ಇಲ್ಲ, ಅಲ್ಲದೆ ಕೆಲವು ತಾಯಂದಿರು ಮಗುವಿಗೆ ತಿನ್ನಲು ಕೊಡುವಾಗ ಮೊಬೈಲ್‌ ಕೊಟ್ಟು ಬಿಡುತ್ತಾರೆ. ಹಾಗೇ ಆಹಾರ ನೀಡಿದರೆ ಮಗು ತಿನ್ನಲ್ಲ, ಪಾಪ, ಖಾಲಿ ಹೊಟ್ಟೆಯಲ್ಲಿ ಮಲಗುವುದಕ್ಕಿಂತ ಮೊಬೈಲ್‌ ನೋಡಿಯಾದರೂ ಸ್ವಲ್ಪ ತಿನ್ನಲಿ ಎಂಬುವುದನ್ನು ತಾಯಿ ಬಯಸುತ್ತಾಳೆ, ಇನ್ನು ಪೋಷಕರು ಏನಾದರೂ ಕೆಲಸ ಮಾಡುವಾಗ ಮಗು ಬಂದು ಗಲಾಟೆ ಮಾಡಿದರೆ, ಅದನ್ನು ಸ್ವಲ್ಪ ಸುಮ್ಮನಿರಿಸಲು ಮೊಬೈಲ್‌ ಕೊಟ್ಟು ಬಿಡುತ್ತಾರೆ.

       ಮೊಬೈಲ್‌ ಮುಂದೆ, ಟ್ಯಾಬ್‌, ಲ್ಯಾಪ್‌ಟಾಪ್‌ ಮುಂದೆ ಮಕ್ಕಳು ತುಂಬಾ ಹೊತ್ತು ಕೂರುವುದು ಒಳ್ಳೆಯದಲ್ಲ, ಅದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ಪ್ರತಿಯೊಬ್ಬ ಪೋಷಕರಿಗೂ ಗೊತ್ತು, ಆದರೆ ಏನು ಮಾಡುವುದು ಮಕ್ಕಲು ಹಠ ಮಾಡುತ್ತಾರೆ ಎಂದು ಕೊಡುತ್ತಾರೆ.

         ಮಕ್ಕಳಿಗೆ ಮೊಬೈಲ್‌ ನೋಡ ಬೇಡ ಎಂದು ಹೇಳಿದರೆ ಈ ಜಮಾನದಲ್ಲಿ ಯಾವ ಮಕ್ಕಳೂ ಕೇಳಲ್ಲ, ನಿಮ್ಮ ಮೇಲಿನ ಭಯಕ್ಕೆ ಅವರು ಮೊಬೈಲ್‌ ಮುಟ್ಟಲು ಹಿಂದೇಟು ಹಾಕಬಹುದು, ಆದರೆ ಅದರ ಮೇಲಿರುವ ಆಕರ್ಷಣೆ ಕಡಿಮೆಯಾಗಲು ಸಾಧ್ಯವಿಲ್ಲ, ಆದ್ದರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಮಕ್ಕಳಿಗೆ ಕೊಡಿ, ಆದರೆ ಕೊಡುವಾಗ ಈ ನಿಯಮಗಳನ್ನು ಅಳವಡಿಸಿ, ಇದರಿಂದ ಅವರು ಮೊಬೈಲ್‌ ಬಳಸಿದ ಸಮಯ ಜ್ಞಾನಾರ್ಜನೆಗೆ ಸಹಕಾರಿ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ, ಬದಲಿಗೆ ಅವರಿಗೆ ಮೊಬೈಲ್‌ ಅನ್ನು ಹೇಗೆ ಬಳಸಬೇಕೆಂಬ ತಿಳುವಳಿಕೆ ಬರುತ್ತದೆ.

       ಹಾಗಾದರೆ ಪೋಷಕರೇ ಮೊಬೈಲ್‌ ಅನ್ನು ಮಕ್ಕಳ ಕೈಗೆ ನೀಡುವಾ ನೀವು ಮಾಡಬೇಕಾಗಿರುವುದೇನು ಎಂದು ನೋಡೋಣ ಬನ್ನಿ:

           

1. ಮೊಬೈಲ್ ನೋಡಲು ಸಮಯ ನಿಗದಿ ಮಾಡಿ

ಎಷ್ಟು ಹೊತ್ತು ಮೊಬೈಲ್‌ ನೋಡಬೇಕು ಎಂಬುವುದಕ್ಕೆ ಸಮಯ ನಿಗದಿ ಮಾಡಿ. 15-20 ನಿಮಿಷ ಮಾತ್ರ ಕೊಡಿ, ಹೆಚ್ಚು ಬಳಕೆ ಮಾಡಿದರೆ ಅದು ಮುಂದೆ ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು ನೆನಪಿರಲಿ.

2. ಮಗು ಏನು ನೋಡುತ್ತದೆ ಎಂಬುವುದು ಗಮನದಲ್ಲಿರಲಿ

ಮೊಬೈಲ್ ಕೊಟ್ಟು ನಿಮ್ಮ ಪಾಡಿಗೆ ನೀವು ಇರಬೇಡಿ. ಅವರು ಮೊಬೈಲ್‌ನಲ್ಲಿ ಏನು ನೋಡುತ್ತಿದ್ದಾರೆ ಎಂಬುವುದನ್ನು ಕೂಡ ಗಮನಿಸಿ. ನಿಮ್ಮ ಮಕ್ಕಳು ಅಪಾಯಕಾರಿ ಗೇಮ್‌ಗಳನ್ನು ಆಡುತ್ತಿದ್ದಾರಾ ಎಂಬುವುದನ್ನೂ ಗಮನಿಸಬೇಕು.

3. ಅವರು ಗ್ಯಾಡ್ಜೆಟ್ ಬಳಸುವಾಗ ಸಮೀಪದಲ್ಲಿಯೇ ಇರಿ ಅವರು ಬಾಯಿಗೆ ಹಾಕುವಂತೆ ಜಾರ್ಜರ್‌ ಇಡಬೇಡಿ, ಅಲ್ಲದೆ ಮಕ್ಕಳಿಗೆ ಜಾರ್ಜ್‌ನಲ್ಲಿಟ್ಟು ಮೊಬೈಲ್‌, ಲ್ಯಾಪ್‌ಟ್ಯಾಪ್‌ ನೀಡಬೇಡಿ.

4. ನಿಮ್ಮ ಮಕ್ಕಳಿಗೆ ನಿಮ್ಮ ಸಾಮಾಜಿಕ ತಾಣಗಳನ್ನು ನೋಡಲು ಸಾಧ್ಯವಾಗಬಾರದು ಮಕ್ಕಳು ನಿಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಅಥವಾ ಫೇಸ್‌ಬುಕ್‌ನಲ್ಲಿ ಏನಾದರೂ ಪ್ರೆಸ್‌ ಮಾಡಿ ಹಾಕಿದರೆ ಅದರಿಂದ ನಿಮಗೆ ಮುಜುಗರ, ಅವುಗಳಿಗೆ ಲಾಕ್‌ ಹಾಕಿ.
5. ಮಕ್ಕಳ ದೈಹಿಕ ಬೆಳವಣಿಗೆಗೆ ಸ್ಕ್ರೀನ್‌ ಮುಂದೆ ಕೂರಿಸುವುದು ಒಳ್ಳೆಯದಲ್ಲ ಮಕ್ಕಳು ಹೆಚ್ಚು ಹೊತ್ತು ಟಿವಿ, ಮೊಬೈಲ್ ಮುಂದೆ ಇದ್ದರೆ ದೈಹಿಕ ಬೆಳವಣಿಗೆಗೆ ಒಳ್ಳೆಯದಲ್ಲ. ಅವರು ಹೆಚ್ಚು ಆಟ ಆಡಿದಷ್ಟೂ ದೈಹಿಕ ಬೆಳವಣಿಗೆಗೆ ಸಹಕಾರಿ. ಅಲ್ಲದೆ ಅವರಲ್ಲಿ ರೋಗ ನಿರೋಧಕ ಶಕ್ತೊ ಹೆಚ್ಚಾಗುವುದು. ನೀವು ಅವರಿಗೆ ಸ್ಪೋರ್ಟ್ಸ್‌, ಸೈಕ್ಲಿಂಗ್‌ ಇವುಗಳಲ್ಲಿ ಆಸಕ್ತಿ ಹೆಚ್ಚಿಸಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries