ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನೂತನ ಸಭಾ ಭವನ ಲೋಕಾರ್ಪಣಾ ಸಮಾರಂಭದ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮವಾಗಿ ಯಕ್ಷಗಾನ ಬಯಲಾಟ ನಡೆಯಿತು. ಇಲ್ಲಿನ ಶ್ರೀ ದುರ್ಗಾಕೃಷ್ಣ ಯಕ್ಷಗಾನ ಕಲಾ ಸಂಘದ ಕಲಾವಿದರಿಂದ `ಚಕ್ರ ಚಂಡಿಕೆ' ಎಂಬ ಪೌರಾಣಿಕ ಪ್ರಸಂಗವು ಪ್ರದರ್ಶನಗೊಂಡಿತು. ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಿರುವ ರಾಘವೇಂದ್ರ ವೈ ಬದಿಯಡ್ಕ ದೀಪ ಬೆಳಗಿಸಿ ಚಾಲನೆ ನೀಡಿದರು. ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ವಿಜೇತ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಅವರ ನಿರ್ದೆಶನದೊಂದಿಗೆ ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಪುಣಿ0ಚಿ0ತ್ತಾಯ ಪೆರ್ಲ, ಮದ್ದಳೆಯಲ್ಲಿ ರಾಘವ ಬಲ್ಲಾಳ್, ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್ ಸಹಕರಿಸಿದರು. ಶ್ರೀ ದುರ್ಗಾಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ವಾಸುದೇವ ಭಟ್ ಚೋಕೆಮೂಲೆ, ಉಪಾದ್ಯಕ್ಷ ಉದಯ ಕುಮಾರ್ ಕಲ್ಲಕಟ್ಟ , ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್, ಕಾರ್ಯದರ್ಶಿ ದಿವ್ಯಾ ಭಟ್ ಉಪ್ಪ0ಗಳ ಮೂಲೆ, ಖಜಾ0ಜಿ ಸತೀಶ್ ವೈ ಏತಡ್ಕ, ಅಧ್ಯಾಪಿಕೆ ಜ್ಯೋತ್ಸ್ನಾ ಕಡ0ದೆಲು, ಗುರುರಾಜ್ ಭಟ್ ಮಾಳಿಗೆಮನೆ, ಸದಾಶಿವ ರೈ ಗೋಸಾಡ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ್ದರು.