ನವದೆಹಲಿ: ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಗಣನೀಯ ಇಳಿಕೆ ಕಂಡುಬಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅದಕ್ಕೆ ಲಸಿಕೆ ಹಂಚಿಕೆಯೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಸದ್ಯ ಭಾರತದಲ್ಲಿ ಶೇ.94 ಪ್ರತಿಶತ ವಯಸ್ಕರು ಮೊದಲ ಡೋಸ್ ಕೊರೊನಾ ಲಸಿಕೆ ಪಡೆದಿದ್ದರೆ, ಶೇ.72 ಪ್ರತಿಶತ ಮಂದಿ ಎರಡೂ ಡೋಸ್ ಗಳನ್ನು ಪೂರ್ತಿಯಾಗಿ ಪಡೆದುಕೊಂಡಿದ್ದಾರೆ.
ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ ಭಾರ್ಗವ ಅವರು ದೇಶದಲ್ಲಿ ಸಾವಿನ ಪ್ರಮಾಣ ಇಳಿಮುಖಗೊಳ್ಳುವುದಕ್ಕೆ ಲಸಿಕೆಯೇ ಪ್ರಮುಖ ಕಾರಣ ಎಂದಿದ್ದಾರೆ.