ತಿರುವನಂತಪುರಂ: 2014 ಮತ್ತು 2016 ರ ನಡುವೆ ಹಲವಾರು ಬಾರಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಯ್ಕಲ್ ಅವರನ್ನು ಕೇರಳದ ನ್ಯಾಯಾಲಯ ನಿರ್ದೋಷಿ ಎಂದು ಹೇಳಿದೆ.
2014 ಮತ್ತು 2016 ರ ನಡುವೆ ಹಲವಾರು ಬಾರಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಯ್ಕಲ್ ಅವರನ್ನು ಕೇರಳದ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ ಗೋಪಕುಮಾರ್ ಅವರು ಫ್ರಾಂಕೊ ಮುಲಕ್ಕಲ್ ಮೇಲಿದ್ದ ಆರೋಪಗಳನ್ನು ರದ್ದುಗೊಳಿಸಿದರು.
ಏನಿದು ಪ್ರಕರಣ?
ಮೇ 5, 2014 ರಂದು ಬಿಷಪ್ ಕುರವಿಲಂಗಾಡ್ ಕಾನ್ವೆಂಟ್‍ಗೆ ಭೇಟಿ ನೀಡಿದ್ದರು ಮತ್ತು ರಾತ್ರಿಯಲ್ಲಿ ತನ್ನ ಕೋಣೆಗೆ ಕರೆದು ತನ್ನೊಂದಿಗೆ ಅಸಹಜ ಲೈಂಗಿಕತೆ ನಡೆಸುವಂತೆ ಒತ್ತಾಯಿಸಿದರು ಎಂದು 45 ವರ್ಷದ ಸನ್ಯಾಸಿನಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. 2014ರಿಂದ 2016ರ ಅವಧಿಯಲ್ಲಿ ಬಿಷಪ್ ತನ್ನ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಸನ್ಯಾಸಿನಿ ಆರೋಪಿಸಿದ್ದರು.
ದೂರಿನ ಬೆನ್ನಲ್ಲೇ ಹಲವು ಸನ್ಯಾಸಿನಿಯರು, ಕಾರ್ಯಕರ್ತರು, ರಾಜಕೀಯ ಮುಖಂಡರು ಮುಳಕ್ಕಲ್ ಬಂಧನಕ್ಕೆ ಆಗ್ರಹಿಸಿದ ಕಾರಣ 2018 ರಲ್ಲಿ ಬಂಧಿಸಲಾಯಿತು.
ಮೇ 5, 2014ರಂದು ಸನ್ಯಾಸಿನಿ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರವೆಸಗಿರುವುದಾಗಿ ಹೇಳಿಕೊಂಡ ದಿನವೇ ತಾನು ಕುರವಿಲಂಗಾಡ್‍ನಲ್ಲಿರುವ ಕಾನ್ವೆಂಟ್‍ನಲ್ಲಿ ಉಳಿದುಕೊಂಡಿಲ್ಲ ಎಂದು ಮುಲಕ್ಕಲ್ ಹೇಳಿಕೊಂಡಿದ್ದರು. ತಾನು ಕಾನ್ವೆಂಟ್‍ಗೆ ಮಾತ್ರ ಭೇಟಿ ನೀಡಿದ್ದೇನೆ ಮತ್ತು ಮುತ್ತಲಕೋಡಂನಲ್ಲಿರುವ ಮತ್ತೊಂದು ಕಾನ್ವೆಂಟ್‍ನಲ್ಲಿ ಉಳಿದುಕೊಂಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡರು.
ಆರೋಪಗಳನ್ನು ನಿರಾಕರಿಸುವ ಸಂದರ್ಭದಲ್ಲಿ, ಮುಲಕ್ಕಲ್ ಸನ್ಯಾಸಿನಿಯು ತನ್ನ ಪತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆಯೊಬ್ಬರು ದೂರಿದ ನಂತರ ಅವರ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸಲಾಗಿದೆ.