ಮಧೂರು: ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದ ಭಜನಾ ವಾರ್ಷಿಕ ಮತ್ತು ವರ್ಷಾವಧಿ ಉತ್ಸವ ಜ.13ರಂದು ಆರಂಭಗೊಳ್ಳಲಿದೆ. 13ರಂದು ಸೂರ್ಯಾಸ್ತದಿಂದ ರಾತ್ರಿ 12.30ರ ತನಕ ಶ್ರೀಮಹಾವಿಷ್ಣು ಭಜನಾ ಸಮಿತಿಯ ನೇತೃತ್ವದಲ್ಲಿ ವಿವಿಧ ಭಜನಾ ಸಂಘಗಳಿಂದ ಬಜನೆ ನಡೆಯಲಿದೆ.
14ರಂದು ಬೆಳಗ್ಗೆ 8 ರಿಂದ ಉಷ:ಪೂಜೆ, ಗಣಹೋಮ, ನವಕ ಇತ್ಯಾದಿ ಜರುಗಲಿದೆ. ಬೆಳಗ್ಗೆ 10 ರಿಂದ ಶ್ರೀಅನ್ನಪ್ರರ್ಣೇಶ್ವರೀ ಭಜನಾ ಸಂಘದಿಂದ ಭಜನೆ, ಸಂಜೆ 7 ರಿಂದ ಶ್ರೀ ಮಹಾವಿಷ್ಣುಭಜನಾ ಸಮಿತಿಯಿಚಿದ ಭಜನೆ 8ರಿಂದ ಉತ್ಸವ ಬಲಿ, ಸುಡುಮದ್ದು ಪ್ರದರ್ಶನ ನಡೆಯುವುದು.
15ರಂದು ಬೆಳಗ್ಗೆ 7.30ಕ್ಕೆದರ್ಶನ ಬಲಿ, ರಾಜಾಂಗಣ ಪ್ರಸಾದ, ನಂತರಶ್ರೀ ದೂಮಾವತಿ ದೈವದ ಆರಾಧನೆ ಜರಗಲಿದೆ.16ರಂದು ಶ್ರೀ ದೂಮಾವತಿ ದೈವದ ಆರಾಧನೆ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ.