ಕಾಸರಗೋಡು: ಕೇರಳದ ಎಲ್ಲ ಗ್ರಾಮಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್ ರೀಸರ್ವೇ ನಡೆಸುವ ಯೋಜನೆಯನ್ವಯ ಕಾಸರಗೋಡು ಜಿಲ್ಲೆಯ 18ಗ್ರಾಮಾಧಿಕಾರಿ ಕಚೇರಿಗಳಲ್ಲಿ ರೀಸರ್ವೇ ನಡೆಸಲಾಗುವುದು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಕಾಸರಗೋಡಿನಲ್ಲಿ ಆಯೋಜಿಸಲಾಯಿತು.
ನೂತನ ತಂತ್ರಜ್ಞಾನದ ಮೂಲಕ, ರೀಬಿಲ್ಡ್ ಕೇರಳ ಯೋಜನೆಯನ್ವಯ ರೀಸರ್ವೇ ನಡೆಸಲಾಗುತ್ತದೆ. ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಜ. 30ರಂದು ಮುಟ್ಟತ್ತೋಡಿ ಗ್ರಾಮಾಧಿಕಾರಿ ಕಚೇರಿಯಲ್ಲಿ ಜರುಗಲಿದೆ. ಡಿಜಿಟಲ್ ರಿಸರ್ವೇ ಅಂಗವಾಗಿ ಜಿಲ್ಲೆಯ ಸರ್ವೇ ಸಿಬ್ಬಂದಿಗಾಗಿ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್ ಚಂದ್ ಉದ್ಘಾಟಿಸಿದರು. ಸರ್ವೇ ಉಪನಿರ್ದೇಶಕ ಕೆ.ಕೆ ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಸರ್ವೇ ನಿರ್ದೇಶಕ ಸಾಂಬಶಿವಾರಾವ್ ಮುಖ್ಯ ಭಾಷಣ ಮಾಡಿದರು. ಸರ್ವೇ ಆಫ್ ಇಂಡಿಯಾ ನಿರ್ದೇಶಕ ಪಿ.ವಿ ರಾಜಶೇಖರ್ ಯೋಜನೆ ಬಗ್ಗೆ ಮಾಃಇತಿ ನೀಡಿದರು. ಸರ್ವೇ ಉಪ ನಿರ್ದೇಶಕ ಪುಷ್ಪಾ ಪಿ.ಆರ್, ಸತೀಶ್ ಕುಮಾರ್ ಪಿ.ಎಸ್, ಸಲೀಂ ಎಸ್ ತರಗತಿ ನಡೆಸಿದರು.