HEALTH TIPS

ಪಾಕ್‌ ಜೈಲಿನಲ್ಲಿರುವ ಭಾರತದ ಪ್ರಜೆಗಳಿಗೆ ಕೋವಿಡ್‌ನಿಂದ ರಕ್ಷಣೆ ಒದಗಿಸಲು ಒತ್ತಾಯ

          ನವದೆಹಲಿ: ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಗಳಾಗಿರುವ ತನ್ನ ನಾಗರಿಕರನ್ನು ಸಾರ್ಸ್‌-ಕೋವಿಡ್-2 ವೈರಸ್‌ಗಳಿಂದ ರಕ್ಷಿಸುವಂತೆ ಭಾರತ ಶನಿವಾರ ಕೇಳಿಕೊಂಡಿದೆ.

           628 ಭಾರತೀಯರು ಅಥವಾ ಭಾರತೀಯರು ಎಂದು ನಂಬಲಾದ 577 ಮೀನುಗಾರರು ಮತ್ತು ಇತರ 51 ಜನರು ಪ್ರಸ್ತುತ ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂದು ಇಸ್ಲಾಮಾಬಾದ್ ನವದೆಹಲಿಗೆ ಮಾಹಿತಿ ನೀಡಿದೆ.

            ಪಾಕಿಸ್ತಾನದ ಜೈಲಿನಲ್ಲಿರುವ 358 ಕೈದಿಗಳನ್ನು (356 ಮೀನುಗಾರರು ಮತ್ತು ಇತರ ಇಬ್ಬರು) ಅವರು ಭಾರತೀಯರು ಎಂದು ದೃಢೀಕರಿಸಿ ಬಿಡುಗಡೆಗೊಳಿಸಬೇಕು ಮತ್ತು ಸ್ವದೇಶಕ್ಕೆ ಕಳುಹಿಸಬೇಕು ಎಂದು ಭಾರತ ಕೋರಿದೆ.

           ಅಲ್ಲದೆ ಭಾರತೀಯರು ಎಂದು ನಂಬಲಾದ ಬಂಧಿತ 182 ಮೀನುಗಾರರು ಮತ್ತು 17 ಇತರ ನಾಗರಿಕ ಕೈದಿಗಳಿಗೆ ತಕ್ಷಣ‌ ರಾಯಭಾರ ಕಚೇರಿ ನೆರವು ಒದಗಿಸುವಂತೆ ಪಾಕಿಸ್ತಾನವನ್ನು ಕೇಳಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಪತ್ರಿಕಾ ಪ್ರಕಟಣೆ ತಿಳಿಸಿದೆ.

           ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತದ ಪ್ರಜೆಗಳೆಂದು ನಂಬಲಾದ ಮಾನಸಿಕವಾಗಿ ಅಸ್ವಸ್ಥರಾಗಿರುವ ಕೈದಿಗಳ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಯಲು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದಿರುವ ಮನೋವೈದ್ಯರಿಗೆ ತ್ವರಿತವಾಗಿ ವೀಸಾಗಳನ್ನು ನೀಡುವಂತೆಯೂ ಕೋರಲಾಗಿದೆ.

           ಭಾರತೀಯರು ಎಂದು ನಂಬಲಾದ 27 ಕೈದಿಗಳು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ ಎಂದು ಇಸ್ಲಾಮಾಬಾದ್ 2018ರ ಆರಂಭದಲ್ಲಿ ತಿಳಿಸಿತ್ತು. ಅವರನ್ನು ಭೇಟಿ ಮಾಡಲು ಮನೋವೈದ್ಯರ ತಂಡವನ್ನು ಕಳುಹಿಸಲು ಕೇಳಿದ್ದ ಮನವಿಗೆ ಅದು 2018ರ ಮಾರ್ಚ್ 7ರಂದು ಅನುಮತಿ ನೀಡಿತ್ತು. ಆದರೆ ಸುಮಾರು ನಾಲ್ಕು ವರ್ಷಗಳು ಕಳೆದರೂ ವೀಸಾ ಒದಗಿಸಿಲ್ಲ.

              ಭಾರತದ ಜೈಲುಗಳಲ್ಲಿ ಬಂಧಿಯಾಗಿರುವ 355 ಪಾಕಿಸ್ತಾನಿ ನಾಗರಿಕರ ಪಟ್ಟಿಯನ್ನು ನವದೆಹಲಿ ಶನಿವಾರ ಇಸ್ಲಾಮಾಬಾದ್‌ಗೆ ಹಸ್ತಾಂತರಿಸಿದೆ. ಇ‌ದರಲ್ಲಿ 73 ಪಾಕಿಸ್ತಾನಿ ಮೀನುಗಾರರಿದ್ದು, ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಡಿ ದಾಟಿದ್ದ ಅವರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಬಂಧಿಸಿದ್ದರು.

            'ಪರಸ್ಪರ ದೇಶದ ಕೈದಿಗಳು ಮತ್ತು ಮೀನುಗಾರರಿಗೆ ಸಂಬಂಧಿಸಿದ ಎಲ್ಲಾ ಮಾನವೀಯ ವಿಷಯಗಳನ್ನು ಆದ್ಯತೆಯ ಮೇಲೆ ತಿಳಿಸಲು ಭಾರತ ಬದ್ಧವಾಗಿದೆ' ಎಂದು ಎಂಇಎ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

            2008ರ ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿ ತಮ್ಮ ಕಾರಾಗೃಹಗಳಲ್ಲಿ ಬಂಧಿಯಾಗಿರುವ ನಾಗರಿಕರ ಪಟ್ಟಿಯನ್ನು ಉಭಯ ದೇಶಗಳು ಶನಿವಾರ ವಿನಿಮಯ ಮಾಡಿಕೊಂಡಿವೆ. ಜನವರಿ1 ಮತ್ತು ಜುಲೈ1 ರಂದು ವರ್ಷಕ್ಕೆ ಎರಡು ಬಾರಿ ಇಂತಹ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲು ಈ ಒಪ್ಪಂದ ಅವಕಾಶ ನೀಡುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries