ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಪಂಜಾಬ್ ನ ಚುನಾವಣಾ ಪ್ರಚಾರಾರ್ಥ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ವೇಳೆ ಪ್ರತಿಭಟನೆಯ ಕಾರಣದಿಂದಾಗಿ ಹಲವು ನಿಮಿಷಗಳ ಕಾಲ ರಸ್ತೆ ಮಧ್ಯೆಯೇ ನಿಂತು ಬಳಿಕ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದರು.

"ಇದು ನಾವೆಲ್ಲರೂ ಖಂಡಿಸಲೇಬೇಕಾದ ಸುದ್ದಿ. ಪಂಜಾಬ್ ನಲ್ಲಿನ ದುಷ್ಕರ್ಮಿಗಳು ಪ್ರಧಾನಿಯ ಜೀವಕ್ಕೆ ಬೆದರಿಕೆ ಒಡ್ಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ" ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡುತ್ತಿದ್ದರು. ಇನ್ನಿತರ ಟ್ವಿಟರ್ ಬಳಕೆದಾರರು ಪ್ರಧಾನಿಯ ವಾಹನಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡುತ್ತಿದ್ದವರ ಕೈಯಲ್ಲಿನ ಬಿಜೆಪಿ ಧ್ವಜವನ್ನು ಬೆಟ್ಟು ಮಾಡಿದ್ದಾರೆ.
ವೀಡಿಯೋ ತುಣುಕಿನಲ್ಲಿ ಪ್ರತಿಭಟನಕಾರರ ಕೈಯಲ್ಲಿ ಬಿಜೆಪಿ ಧ್ವಜವಿರುವುದನ್ನು ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್ ಬಿ.ವಿ ಟ್ವೀಟ್ ಮಾಡಿದ್ದಾರೆ. ಅದಲ್ಲದೇ, ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಲದಲ್ಲಿ ಇದ್ದ ಬದ್ದ ಕುರ್ಚಿಗಳೆಲ್ಲಾ ಖಾಲಿಯಿದ್ದು, ಇದುವೇ ʼನಿಜವಾದ ಭದ್ರತಾ ಲೋಪʼ ಎಂದು ವ್ಯಂಗ್ಯವಾಡಿದ್ದಾರೆ. ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಚನ್ನಿ, "ಯಾವುದೇ ಭದ್ರತಾ ಲೋಪವೂ ನಮ್ಮಿಂದ ಸಂಭವಿಸಿಲ್ಲ, ಪ್ರಧಾನಿಗೆ ತೊಂದರೆಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ.