ನವದೆಹಲಿ: 'ಡಿಜಿಲಾಕರ್' ಖಾತೆಯಲ್ಲಿ ಲಭ್ಯವಿರುವ ಪದವಿ ಪ್ರಮಾಣಪತ್ರ, ಅಂಕಪಟ್ಟಿ ಹಾಗೂ ಇತರ ದಾಖಲೆಗಳು ಸಿಂಧುತ್ವ ಹೊಂದಿದ್ದು, ಅವುಗಳನ್ನು ಸ್ವೀಕರಿಸುವಂತೆ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದೆ.

ಈ ಸಂಬಂಧ ಎಲ್ಲ ವಿ.ವಿಗಳು ಹಾಗೂ ಕಾಲೇಜುಗಳಿಗೆ ಯುಜಿಸಿ ಪತ್ರ ಬರೆದಿದೆ.
'ನ್ಯಾಷನಲ್ ಅಕಾಡೆಮಿಕ್ ಡೆಪಾಜಿಟರಿಯು (ಎನ್‌ಎಡಿ) ಪದವಿ ಪ್ರಮಾಣಪತ್ರಗಳು ಹಾಗೂ ಅಂಕಪಟ್ಟಿಗಳನ್ನು ಡಿಜಿಟಲ್ ನಮೂನೆಯಲ್ಲಿ ಆನ್‌ಲೈನ್ ವಿಧಾನದಲ್ಲಿ ಸಂಗ್ರಹಿಸಿಡುವ ವ್ಯವಸ್ಥೆಯಾಗಿದೆ. ವಿದ್ಯಾರ್ಥಿಗಳು ಯಾವುದೇ ವೇಳೆಯಲ್ಲಿ ಹಾಗೂ ಎಲ್ಲಿಯೇ ಇದ್ದರೂ ಅಧಿಕೃತ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಇದರಿಂದ ಸಾಧ್ಯವಾಗಲಿದೆ' ಎಂದು ವಿವರಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು 'ಎನ್‌ಎಡಿ' ಯೋಜನೆ ಅನುಷ್ಠಾನಕ್ಕೆ ಯುಜಿಸಿಯನ್ನು ಅಧಿಕೃತ ಸಂಸ್ಥೆಯನ್ನಾಗಿ ನಿಯೋಜನೆ ಮಾಡಿದೆ. 'ಡಿಜಿಲಾಕರ್' ನೆರವಿನೊಂದಿಗೆ ಯುಜಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸೇವೆ ಪಡೆಯಲು ಬಳಕೆದಾರರು ಯಾವುದೇ ಶುಲ್ಕ ಭರಿಸಬೇಕಾಗಿಲ್ಲ.
ಶೈಕ್ಷಣಿಕ ಸಂಸ್ಥೆಗಳು ನೋಂದಣಿ ಮಾಡಿಸಿಕೊಂಡ ನಂತರ, ತಾವು ನೀಡುವ ಪದವಿ ಪ್ರಮಾಣಪತ್ರಗಳು, ಅಂಕಪಟ್ಟಿಗಳನ್ನು ಡಿಜಿಲಾಕರ್ ಎನ್‌ಎಡಿ ಪೋರ್ಟಲ್ ಮೂಲಕ ಎನ್‌ಎಡಿಯಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.