ನವದೆಹಲಿ: ಒಲಂಪಿಕ್ ಚಿನ್ನದ ಹುಡುಗ ನೀರಜ್ ಛೋಪ್ರಾ ಅವರಿಗೆ ಪರಂ ವಿಶಿಷ್ಟ ಸೇವಾ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ಈ ಪ್ರಶಸ್ತಿಯನ್ನು ೨೯ ಮಂದಿಗೆ ನೀಡಲಾಗುತ್ತಿದೆ.
ಗಣರಾಜ್ಯೋತ್ಸವದ ಮುನ್ನಾದಿನದಂದು ಒಲಿಂಪಿಯನ್ ನೀರಜ್ ಚೋಪ್ರಾ ಅವರಿಗೆ ಪರಂ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಜಾವ್ಲಿನ್ ಥ್ರೋ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ 384 ರಕ್ಷಣಾ ಸಿಬ್ಬಂದಿಯನ್ನು ಶೌರ್ಯ ಮತ್ತು ಇತರ ಪ್ರಶಸ್ತಿಗಳೊಂದಿಗೆ ಗೌರವಿಸಲಿದ್ದಾರೆ.
ಪ್ರಶಸ್ತಿಗಳಲ್ಲಿ 12 ಶೌರ್ಯ ಚಕ್ರಗಳು, 29 ಪರಂ ವಿಶಿಷ್ಟ ಸೇವಾ ಪದಕಗಳು. ಇದರ ಮುಂದುವರಿದ ಭಾಗವಾಗಿ ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, 53 ಅತಿ ವಿಶಿಷ್ಟ ಸೇವಾ ಪದಕಗಳು, 13 ಯುದ್ಧ ಸೇವಾ ಪದಕಗಳನ್ನು ನೀಡಲಾಗುತ್ತಿದೆ.