HEALTH TIPS

ಮೂರನೇ ಬಾರಿಯೂ ಗಣರಾಜ್ಯೋತ್ಸವ ಪೆರೇಡ್ ನಿಂದ ಹೊರಗುಳಿದ ಕೇರಳ: ಸ್ತಬ್ದಚಿತ್ರಕ್ಕೆ ಅನುಮತಿ ನಿರಾಕರಣೆ!

                                      

             ನವದೆಹಲಿ: ರಾಷ್ಟ್ರದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ತಬ್ದಚಿತ್ರ ಪ್ರದರ್ಶನದಿಂದ ಕೇರಳ ಮೂರನೇ ಬಾರಿಗೆ  ತಿರಸ್ಕರಿಸಲ್ಪಟ್ಟಿದೆ.  ಕೇರಳ  ಈ ವರ್ಷವೂ ಮಹಾ ಪರೇಡ್‍ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ.  ಕೇರಳದಿಂದ ಶ್ರೀ ನಾರಾಯಣ ಗುರು ಮತ್ತು ಜಟಾಯು ಬಂಡೆಯ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಮನವಿ ಮಾಡಲಾಗಿತ್ತು.  ರಕ್ಷಣಾ ಸಚಿವಾಲಯವು ಸ್ತಬ್ದಚಿತ್ರವನ್ನು ಆದಿ ಶಂಕರ ಎಂದು ಬದಲಾಯಿಸುವಂತೆ ಕೇಳಿಕೊಂಡಿತ್ತು.  ರಾಜ್ಯ ಈ ಬದಲಾವಣೆಗೆ ಒಪ್ಪಿಕೊಳ್ಳದೊದ್ದರೆ ಅಪೇಕ್ಷೆ  ಹಿಂಪಡೆಯುವಂತೆಯೂ ತಿಳಿಸಲಾಗಿತ್ತು.

                            2019 ಮತ್ತು 2020 ರಲ್ಲೂ ಕೇರಳ ಗಣರಾಜ್ಯೋತ್ಸವ  ಪರೇಡ್‍ನಿಂದ ಹೊರಹಾಕಲಾಗಿತ್ತು.

                  ಮೊದಲ ಸುತ್ತಿನ ಸ್ಕ್ರೀನಿಂಗ್‍ನಲ್ಲಿ, ಕೇರಳದ ಸ್ತಬ್ದಚಿತ್ರವು ಸಂಬಂಧಿಸಿದ ಸಮಿತಿಯಿಂದ ಹೆಚ್ಚಿನ ಮೆಚ್ಚುಗೆಯನ್ನು ಪಡೆಯಿತು.  ಆದಾಗ್ಯೂ, ನಂತರದ ಹಂತದಲ್ಲಿ, ಅದನ್ನು ತಿರಸ್ಕರಿಸಲಾಯಿತು.

         ಸಚಿವಾಲಯದ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಕೇರಳ ಸಿದ್ಧವಿಲ್ಲದ ಕಾರಣ, ಸಲ್ಲಿಕೆಯನ್ನು ತಿರಸ್ಕರಿಸಲಾಯಿತು.  ಐದು-ಹಂತದ ಪರೀಕ್ಷೆಯ ಮೂಲಕ ಪರೇಡ್ ಸ್ತಬ್ದಚಿತಗರ ಆಯ್ಕೆ ಮಾಡಲಾಗುತ್ತದೆ.

           2020 ರಲ್ಲಿ, ಕೇರಳದ ಸ್ತಬ್ಧ ಚಿತ್ತ ವನ್ನು ತಿರಸ್ಕರಿಸಿದಾಗ, ಆಗಿನ ಕಾನೂನು ಸಚಿವ ಎಕೆ ಬಾಲನ್ ಅವರು ಕೇಂದ್ರದ ನಿರ್ಧಾರವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದರು.  ಕೇರಳ ಕಲಾಮಂಡಲಂ, ಬೋಟ್ ರೇಸ್, ಆನೆ ಮೆರವಣಿಗೆ, ಮೋಹಿನಿಯಾಟ್ಟಂ, ತೆಯ್ಯಂ, ಕಥಕ್ಕಳಿ ಮತ್ತು ಚೆಂಡಮೇಳ ಒಳಗೊಂಡ ಟ್ಯಾಬ್ಲೋವನ್ನು ರಾಜ್ಯವು ಪ್ರಸ್ತಾಪಿಸಿತ್ತು.  ಆರೋಪಗಳಿಗೆ ಪ್ರತಿಕ್ರಿಯಿಸಿದ ತೀರ್ಪುಗಾರರ ಸದಸ್ಯೆ ಮತ್ತು ಖ್ಯಾತ ನೃತ್ಯಗಾರ್ತಿ ಜಯಪ್ರದಾ ಮೆನನ್, ಗಣರಾಜ್ಯೋತ್ಸವ ಪರೇಡ್ ಕೇಂದ್ರದ ಆದ್ಯತೆಯಾಗಿದೆ ಮತ್ತು ಅವರು ಅತ್ಯುತ್ತಮವಾದವರನ್ನು ಆಯ್ಕೆ ಮಾಡಲು ಬದ್ಧರಾಗಿರುತ್ತದೆ ಎಂದು ಹೇಳಿದ್ದಾರೆ.  ಮೂರನೇ ಹಂತದಲ್ಲಿ ಪರೇಡ್‍ನಿಂದ ಕೇರಳವನ್ನು ಹೊರಹಾಕಲಾಯಿತು.

          2013 ರಲ್ಲಿ ಪರೇಡ್‍ನಲ್ಲಿ ಕೇರಳವು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಗಮನಾರ್ಹವಾಗಿ, ಕೇಂದ್ರದ ವಿವಿಧ ನೀತಿಗಳಿಗಾಗಿ ಟೀಕಿಸುವ ರಾಜ್ಯಗಳಲ್ಲಿ ಕೇರಳವೂ ಒಂದಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries