HEALTH TIPS

ಸ್ವಪ್ನಾಳನ್ನೂ ವಾಪಸ್ಸು ಕರ್ತವ್ಯಕ್ಕೆ ನಿಯೋಜಿಸಬಹುದಿತ್ತಲ್ಲವೇ? ಮುಖ್ಯಮಂತ್ರಿ ಹಾಗೂ ಚಿನ್ನಾಭರಣ ಕಳ್ಳ ಸಾಗಣೆ ಆರೋಪಿಗಳ ನಡುವೆ ಷಡ್ಯಂತ್ರ: ರಮೇಶ್ ಚೆನ್ನಿತ್ತಲ ಆರೋಪ

                              

                     ತಿರುವನಂತಪುರಂ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಖುಲಾಸೆಯಾಗುವ ಮುನ್ನ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಮರುಸೇರ್ಪಡೆ ಮಾಡುವ ನಿರ್ಧಾರದ ಬಗ್ಗೆ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ  ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

               ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಕಸ್ಟಮ್ಸ್ ಮತ್ತು ಇಡಿ ದಾಖಲಿಸಿರುವ ಪ್ರಕರಣಗಳಲ್ಲಿ ಶಿವಶಂಕರ್ ಇನ್ನೂ ಆರೋಪಿಯಾಗಿದ್ದಾನೆ. ವಂಚನೆ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ ಎಂದು ರಮೇಶ್ ಚೆನ್ನಿತ್ತಲ ಗಮನ ಸೆಳೆದರು.

           ಆದರೆ ಪ್ರಕರಣ ಇತ್ಯರ್ಥಗೊಳ್ಳುವ ಮೊದಲೇ ಆರೋಪಿಯನ್ನು ಮತ್ತೆ ಉನ್ನತ ಸರ್ಕಾರಿ ಸೇವೆಗೆ ಸೇರಿಸಲು ಸರ್ಕಾರ ಆಸಕ್ತಿ ತೋರಿಸಿರುವುದರ ಹಿಂದೆ ಹುನ್ನಾರವಿದೆ. ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಳನ್ನೂ ಮುಖ್ಯಮಂತ್ರಿಯವರ ಹಳೆ ಕೆಲಸಕ್ಕೆ ಸೇರಿಸಿಕೊಂಡರೆ ಎಲ್ಲವೂ ಸರಿ ಹೋಗುತ್ತದೆ ಎಂದು ರಮೇಶ್ ಚೆನ್ನಿತ್ತಲ ವ್ಯಂಗ್ಯವಾಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries