ತಿರುವನಂತಪುರ: ಕೋವಿಡ್ ನಿಯಂತ್ರಣಗಳ ನಡುವೆಯೂ ಈ ಬಾರಿ ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದಲ್ಲಿ 154.5ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಆರಂಭದ ದಿನಗಳಲ್ಲಿ ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಗರಿಷ್ಠ 5ಸಾವಿರ ಮಂದಿಗಷ್ಟೆ ದರ್ಶನ ಭಾಗ್ಯ ಕಲ್ಪಿಸಲಾಗಿದ್ದು, ಇದರಿಂದ ಆದಾಯದಲ್ಲಿ ಗಣನೀಯ ಕುಸಿತವುಂಟಾಗಿತ್ತು.
2019ರ ವೇಳೆ ದೇವಸ್ಥಾನದಲ್ಲಿ 269ಕೋಟಿ ರೂ. ಆದಾಯ ಲಭಿಸಿತ್ತು. ಈ ಬಾರಿ ಕೋವಿಡ್ ಮಾನದಂಡ ಹಂತ ಹಂತವಾಗಿ ಸಡಿಲಿಕೆ ಮಾಡುತ್ತಾ ಬಂದ ಕಾರಣ ಆದಾಯದಲ್ಲೂ ಏರಿಕೆ ಕಂಡುಬರಲಾರಂಭಿಸಿದೆ. ಕಾಣಿಕೆ ರೂಪದಲ್ಲಿ 64.46ಕೋಟಿ ರೂ. ಸಂಗ್ರಹವಾಘಿದ್ದರೆ, ಅರವಣ ಪಾಯಸ ಸೇರಿದಂತೆ ಪ್ರಸಾದ ಮಾರಾಟದಿಂದ 59.75ಕೋಟಿ ರೂ., ಏಳು ಕೋಟಿ ರೂ. ಅಪ್ಪಂ ಮಾರಾಟದಿಂದ ಸಂಗ್ರಹವಾಗಿದೆ. ಈ ಬರಿ 21.36ಲಕ್ಷ ಮಂದಿ ಭಕ್ತಾದಿಗಳು ಶಬರಿಮಲೆ ತಲುಪಿದ್ದಾರೆ. ಮಕರ ಜ್ಯೋತಿ ಕಾಲಾವಧಿಯಲ್ಲಿ 8.11ಲಕ್ಷ ಭಕ್ತಾದಿಗಳು ಶಬರಿಮಲೆ ತಲುಪಿರುವುದಾಗಿ ಲೆಕ್ಕಾಚಾರ ತಿಳಿಸಿದೆ.