ತಿರುವನಂತಪುರ: ಓಮಿಕ್ರಾನ್ ಸೋಂಕಿಗೊಳಗಾಗುವವರು ವಾಸನೆ ಮತ್ತು ರುಚಿ ಕಳೆದುಕೊಳ್ಳುವ ಅಪಾಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕೊರೋನಾ ಬಾಧಿತರಾದವರು ವಾಸನೆ ಮತ್ತು ರುಚಿಯನ್ನು ಕಳೆದುಕೊಳ್ಳುವರು. ಡೆಲ್ಟಾ ರೂಪಾಂತರವು ಸಹ ಇದನ್ನು ಹೊಂದಿತ್ತು. ಆದರೆ ಒಮಿಕ್ರಾನ್ ನಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿಲ್ಲ ಎಂದು ಸಚಿವರು ಹೇಳಿದರು.
ಜ್ವರ ಬಂದಾಗ ವಾಸನೆ ಮತ್ತು ರುಚಿ ಕಳೆದುಹೋಗುವುದಿಲ್ಲ ಎಂದು ಭಾವಿಸಿ ಕೊರೋನಾ ಇಲ್ಲ ಎಂದು ಭಾವಿಸಬೇಡಿ. ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಗೆ ಒಳಗಾಗಬೇಕು. ರೋಗಲಕ್ಷಣವಿಲ್ಲದ ರೋಗಿಗಳಿಂದ ವೈರಸ್ ಹರಡುತ್ತದೆ. ಕೊರೋನಾ ಪ್ರೋಟೋಕಾಲ್ ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಒತ್ತಾಯಿಸಿದರು.
ಕೊರೋನಾ ಚಿಕಿತ್ಸೆಗೆ ಔಷಧಿಗಳ ಕೊರತೆಯ ವರದಿಗಳನ್ನು ಸಚಿವರು ತಳ್ಳಿಹಾಕಿದರು. ಮೊನೊಕ್ಲೋನಲ್ ಪ್ರತಿಕಾಯದ ಕೊರತೆಯಿಲ್ಲ. ಚಿಕಿತ್ಸೆಯ ಪೆÇ್ರೀಟೋಕಾಲ್ ಪ್ರಕಾರ ಔಷಧವನ್ನು ನೀಡಲಾಗುತ್ತದೆ. ಬೆಲೆ ಹೆಚ್ಚಿರುವುದರಿಂದ ಹೆಚ್ಚು ಖರೀದಿಸಬೇಡಿ. ಬೇಡಿಕೆಯ ಮೇರೆಗೆ ಖರೀದಿಸಿ. ಔಷಧವನ್ನು ಯಾವಾಗ ವಿತರಿಸಬೇಕು ಎಂಬ ನಿರ್ಧಾರವನ್ನು ಆಯಾ ಸಂಸ್ಥೆಗಳ ವೈದ್ಯಕೀಯ ಮಂಡಳಿ ತೆಗೆದುಕೊಳ್ಳುತ್ತದೆ ಎಂದು ಸಚಿವರು ಹೇಳಿದರು.