ಕಾಸರಗೋಡು: ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿಯ 23ನೇ ಪಾರ್ಟಿ ಕಾಂಗ್ರೆಸ್ ಜ. 21ರಿಂದ 23ರ ವರೆಗೆ ಮಡಿಕೈ ಅಂಬಲತ್ತುಕರಯಿಲ್‍ನಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾದ ಕೆ. ಬಾಲಕೃಷ್ಣನ್ ನಗರದಲ್ಲಿ ಜರುಗಲಿದೆ. ಮೂರು ದಿವಸಗಳ ಕಾಲ ನಡೆಯಲಿರುವ ಜಿಲ್ಲಾ ಸಮ್ಮೇಳನವನ್ನು ಸಿಪಿಎಂ ಪಾಲಿಟ್‍ಬ್ಯೂರೋ ಸದಸ್ಯ ಎಸ್. ರಾಚಂದ್ರನ್ ಪಿಳ್ಳೆ ಉದ್ಘಾಟಿಸುವರು ಎಂದು ಸಿಪಿಎಂ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಮಾಸ್ಟರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಡಿಕೈ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ. ಮುಖಂಡರಾದ ಪಿ.ಕರುಣಾಕರನ್, ಎಂ.ವಿ ಗೋವಿಂದನ್ ಮಾಸ್ಟರ್, ಪಿ.ಕೆ ಶ್ರೀಮತಿ, ಶೈಲಜಾ ಟೀಚರ್, ಟಿ.ಪಿ ರಾಮಕೃಷ್ಣನ್, ಆನತ್ತಲವಟ್ಟ ಆನಂದನ್ ಮುಂತಾದವರು ಪಾಲ್ಗೊಳ್ಳುವರು. ಕೋವಿಡ್ ಮಾನದಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಾಂಸ್ಕøತಿಕ ಸಮ್ಮೇಳನ, ಕೊಡಿಮರ ಜಾಥಾ ಕೈಬಿಡಲಾಗಿದೆ. ಜಿಲ್ಲೆಯ 26120ಮಂದಿ ಸದಸ್ಯರನ್ನು ಪ್ರತಿನಿಧೀಕರಿಸಿ 150ಮಂದಿ ಪ್ರತಿನಿಧೀಗಳು, 35ಮಂದಿ ಸಮಿತಿ ಸದಸ್ಯರು ಸೇರಿದಂತೆ 185ಮಂದಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ ಸತೀಶ್ಚಂದ್ರನ್, ವಿ.ಕೆ ರಾಜನ್, ಸಿ.ಪ್ರಭಾಕರನ್, ಎಂ. ರಾಜನ್, ಕೋಟರ ವಾಸುದೇವನ್ ಉಪಸ್ಥಿತರಿದ್ದರು.