ತ್ರಿಶೂರ್: ವೈದ್ಯಕೀಯ ಕಾಲೇಜು ಆಸ್ಪತ್ರೆಯಲಲಿ ಇಬ್ಬರ ಮೃತದೇಹಗಳು ಅದಲು ಬದಲಾದ ಘಟನೆ ನಡೆದಿದೆ. ತ್ರಿಶೂರ್ ಚೇತುವೆಯ ಸಹದೇವನ್ ಮತ್ತು ವಡಕ್ಕಂಚೇರಿಯ ಸೆಬಾಸ್ಟಿಯನ್ ಅವರ ಮೃತದೇಹಗಳು ಆಸ್ಪತ್ರೆಯಲ್ಲಿ ಅದಲು ಬದಲಾಗಿದ್ದು ಘಟನೆಯಲ್ಲಿ ಇಬ್ಬರು ನೌಕರರನ್ನು ಅಮಾನತುಗೊಳಿಸಲಾಗಿದೆ.
ಸಹದೇವನ್ ಮತ್ತು ಸೆಬಾಸ್ಟಿಯನ್ ಗುರುವಾರ ಬೆಳಗ್ಗೆ ಕೊರೋನಾದಿಂದ ಸಾವನ್ನಪ್ಪಿದ್ದರು. ಬೆಳಗ್ಗೆ ಸಹದೇವನ ಸಂಬಂಧಿಕರು ಬಂದಾಗ ಸೆಬಾಸ್ಟಿಯನ್ ಅವರ ಮೃತದೇಹವನ್ನು ಹಸ್ತಾಂತರಿಸಲಾಯಿತು. ಮಧ್ಯಾಹ್ನದ ನಂತರ ಸೆಬಾಸ್ಟಿಯನ್ ಸಂಬಂಧಿಕರು ಆಸ್ಪತ್ರೆಗೆ ಬಂದರು. ಆದರೆ ಶವ ಪತ್ತೆಯಾಗಿರಲಿಲ್ಲ. ನಂತರದ ಪರೀಕ್ಷೆಯಲ್ಲಿ ಸಹದೇವನ ದೇಹ ಪತ್ತೆಯಾಗಿದೆ.
ಮೃತದೇಹಗಳು ಬದಲಾಗಿರುವ ಅರಿವು ಬರುತ್ತಿರುವಂತೆ ಸಹದೇವನ ಸಂಬಂಧಿಕರನ್ನು ಸಂಪರ್ಕಿಸಿದಾಗ ಅಂತ್ಯಕ್ರಿಯೆಯ ಕಾರ್ಯಗಳು ಪೂರ್ಣಗೊಂಡಿರುವುದು ಗಮನಕ್ಕೆ ಬಂತು. ಕೂಡಲೇ ಸೆಬಾಸ್ಟಿಯನ್ ಅವರ ಸಂಬಂಧಿಕರು ಮತ್ತು ಆಸ್ಪತ್ರೆ ಅಧಿಕಾರಿಗಳು ಸಹದೇವನ ಮನೆಗೆ ಬಂದರು. ಈ ವೇಳೆ ಆಸ್ಪತ್ರೆ ಅಧಿಕಾರಿಗಳು ಹಾಗೂ ಇಬ್ಬರ ಸಂಬಂಧಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಬೂದಿಯಾದರೂ ಬೇಕು ಎಂದು ಸೆಬಾಸ್ಟಿಯನ್ ಸಂಬಂಧಿಕರು ಹೇಳಿದಾಗ ಸಮಸ್ಯೆ ಬಗೆಹರಿಯಿತು. ಸೂಕ್ತ ಪರೀಕ್ಷೆ ನಡೆಸದೆ ಶವಗಳನ್ನು ಹಸ್ತಾಂತರಿಸಲಾಗಿದ್ದು, ಮೃತದೇಹಗಳನ್ನು ಹಸ್ತಾಂತರಿಸಿ ಲೋಪವಾಗಿತ್ತು.