ಕಾಸರಗೋಡು: ಕಾಸರಗೋಡಲ್ಲಿ ಆನ್‌ಲೈನ್ ತರಗತಿ ವೇಳೆ ಅಶ್ಲೀಲ ನೃತ್ಯ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಕಾಞಂಗಾಡ್ ನಲ್ಲಿ ಈ ಘಟನೆ ನಡೆದಿದೆ. ನಗರದ ಸಮೀಪದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆನ್‌ಲೈನ್ ತರಗತಿಯ ವೇಳೆ ಅಶ್ಲೀಲ ನೃತ್ಯ ಪ್ರದರ್ಶಿಸಲಾಗಿದೆ.
ಶಿಕ್ಷಕರು ತರಗತಿ ತೆಗೆದುಕೊಳ್ಳುತ್ತಿರುವಾಗ ಇದನ್ನು ಮಾಡಲಾಗಿದೆ. ವೀಡಿಯೊ ಅನ್‌ಮ್ಯೂಟ್ ಆಗಿದ್ದರಿಂದ ತರಗತಿಯಲ್ಲಿದ್ದ ಹಲವು ಮಕ್ಕಳು ಇದನ್ನಿ ವೀಕ್ಷಿಸಿರುವ ಸಾಧ್ಯತೆಯಿದೆ. ವಿಡಿಯೋದಲ್ಲಿ ಮುಖ ಮುಚ್ಚಿಕೊಂಡಿದ್ದಾರೆ.
ಶಾಲಾ ವಿದ್ಯಾರ್ಥಿಯ ಲಿಂಕ್ ಬಳಸಿ ಬೇರೆ ಯಾರೋ ಹತ್ತಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯಲ್ಲಿ ಶಿಕ್ಷಕರ ದೂರಿನ ಮೇರೆಗೆ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಶಾಲೆಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು.