ಮುಂಬೈ: ದೇಶದಲ್ಲೇ ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ಮೊದಲ ಪಕ್ಷ ಶಿವಸೇನಾ ಎಂದು ಶಿವಸೇನಾ ಪಕ್ಷದ ಸಂಸದ, ಹಿರಿಯ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಶಿವಸೇನೆ ಹಿಂದುತ್ವದ ಉದ್ದೇಶಕ್ಕೆ ಕೇವಲ ಬಾಯಿಮಾತಿನ ಸೇವೆ ಸಲ್ಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಸಂಜಯ್ ರಾವುತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
1987- 88ರ ಸಮಯದಲ್ಲಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಮತ ಕೇಳಿತ್ತು. ಆ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿತ್ತು. ನಂತರವೇ ಬಿಜೆಪಿ ಶಿವಸೇನೆ ಜೊತೆ ಮೈತ್ರಿಗೆ ಮುಂದಾಗಿತ್ತು. ಹಿಂದೂಗಳ ಮತ ಒಡೆದು ಹಂಚಿಹೋಗುವುದನ್ನು ತಡೆಗಟ್ತಲು ಭಾಳಾ ಸಾಬ್ ಠಾಕ್ರೆ ಅಂದು ಮೈತ್ರಿಗೆ ಮನಸ್ಸು ಮಾಡಿದ್ದರು. ಈ ಇತಿಹಾಸ ಬಿಜೆಪಿಯವರಿಗೆ ಮರೆತುಹೋಗಿದೆ ಎಂದು ರಾವುತ್ ಅಣಕವಾಡಿದ್ದಾರೆ.