ನವದೆಹಲಿ: ಭದ್ರತಾ ಕಾರಣಗಳಿಗಾಗಿ ಖಾಸಗಿ ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಪ್ರಸಾರವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಭದ್ರತೆಯ ಕಾರಣದಿಂದ ಪ್ರಸಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧಿಸಿದೆ.
ಪ್ರಸಾರ ಸ್ಥಗಿತಗೊಳ್ಳಲಿದೆ ಎಂದು ವಾಹಿನಿ ಖಚಿತಪಡಿಸಿದೆ. ಮೀಡಿಯಾ ಒನ್ ಸಂಪಾದಕ ಪ್ರಮೋದ್ ರಾಮನ್ ಅವರು ಆದೇಶದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಪ್ರಸಾರವನ್ನು ಅಮಾನತುಗೊಳಿಸುವ ಮನವಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದು ಹೇಳಿದರು.