ಪಾಲಕ್ಕಾಡ್: ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ ಪಿಡಬ್ಲ್ಯುಡಿ ಕಾರ್ಯಪಾಲಕ ಇಂಜಿನಿಯರ್ ಅಮಾನತುಗೊಂಡಿದ್ದಾರೆ. ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದ ಪ್ರೇಮ್‍ಜಿಲಾಲ್ ವಿರುದ್ಧ ಕೇರಳ ರಸ್ತೆ ನಿಧಿ ಮಂಡಳಿ ಕ್ರಮ ಕೈಗೊಂಡಿದೆ.
ಚಿರಕ್ಕಲ್ಪಾಡಿ-ಕಂಜಿರಪುಳ, ಒಟ್ಟಪ್ಪಾಲಂ-ಪೆರಿಂತಲ್ಮಣ್ಣ, ಎಂಇಎಸ್-ಪಯ್ಯನೆಡಂ, ಮನ್ನಾಕ್ರ್ಕಾಡ್-ಚಿನ್ನತ್ತಡಕಂ ಮತ್ತು ಕೊಂಗಾಡ್-ಮನ್ನಾಕ್ರ್ಕಾಡ್ ಟಿಪ್ಪು ಸುಲ್ತಾನ್ ರಸ್ತೆ ಕಾಮಗಾರಿಗಳ ದೂರಿನ ಮೇರೆಗೆ ಈ ಕ್ರಮ ಕೈಗೊಳ|ಳಲಾಗಿದೆ. ಯೋಜನೆಗಳು ವಿಳಂಬವಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.