ಪತ್ತನಂತಿಟ್ಟ: ಬಾಲಿವುಡ್ ನಟ ಅಜಯ್ ದೇವಗನ್ ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಿಗೆ ನಿನ್ನೆ ಭೇಟಿ ನೀಡಿದರು. ನಿನ್ನೆ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮೈದಾನ ತಲುಪಿದ ಅಜಯ್ ದೇವಗನ್ 11 ಗಂಟೆ ಸುಮಾರಿಗೆ ಇರುಮುಡಿಯೊಂದಿಗೆ 18 ಮೆಟ್ಟಿಲು ಹತ್ತಿ ದರ್ಶನ ಪಡೆದರು.
ಅಜಯ್ ದೇವಗನ್ ಶಬರಿಮಲೆಗೆ ಭೇಟಿ ನೀಡಿರುವುದು ಇದು ನಾಲ್ಕನೇ ಬಾರಿಯಾಗಿದೆ. ಶಬರಿಮಲೆಗೆ ಭೇಟಿ ನೀಡಿದ ಬಳಿಕ ಮೇಲ್ಶಾಂತಿ ಹಾಗೂ ತಂತ್ರಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಾಳಿಗಪುರದಲ್ಲಿ ದರ್ಶನ ಮುಗಿಸಿ ನೈವೇದ್ಯ ಅರ್ಪಿಸಿದರು. ಮಧ್ಯಾಹ್ನ ಬಳಿಕ ಹಿಂತೆರಳಿದರು.