ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿಯ 2021-22ನೇ ವರ್ಷದ ಯೋಜನೆಯಂತೆ ಪಂಚಾಯತು ವ್ಯಾಪ್ತಿಯ ಕ್ಷೀರೋತ್ಪಾದಕ ಸೊಸೈಟಿ ಮೂಲಕ ನೀಡಲಾಗುವ ಪಶು ಆಹಾರ ವಿತರಣೆಗೆ ಚಾಲನೆ ನಡೆಸಲಾಯಿತು.
ಪೆರ್ಲ ಕ್ಷೀರೋತ್ಪಾದಕ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪಶು ಆಹಾರ ವಿತರಣೆಯನ್ನು ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ನ ಪೆರ್ಲ ವೆಟರ್ನರಿ ಸರ್ಜನ್ ಡಾ. ಬ್ರಿಜಿಟ್, ಪೆರ್ಲ ಕ್ಷೀರೋತ್ಪಾದಕ ಸಹಕಾರಿ ಸಂಘದ ನಿರ್ದೇಶಕರು, ಕಾರ್ಯದರ್ಶಿ ಮೊದಲಾದವರು ಪಾಲ್ಗೊಂಡಿದ್ದರು.