ಬದಿಯಡ್ಕ: ಕಾಸರಗೋಡು ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಪ್ರಸಿದ್ಧ ಯುವ ವಯಲಿನ್ ವಾದಕ ವಿವೇಕ್ ರಾಜ ಕೆ.ಸಿ. ಕಲ್ಲಿಕೋಟೆ ಅವರಿಂದ ವಯಲಿನ್ ಕಚೇರಿ ಜರಗಿತು. ಮೃದಂಗದಲ್ಲಿ ವಿದ್ವಾನ್ ಎನ್.ಹರಿ, ಘಟಂನಲ್ಲಿ ವಿದ್ವಾನ್ ಕೋವೈ ಜಿ.ಸುರೇಶ್, ಮೋರ್ಸಿಂಗ್‍ನಲ್ಲಿ ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕೋತ್, ತಬಲಾದಲ್ಲಿ ಸು|ಧೀರ್ ಕಡಲುಂಡಿ ಸಹಕರಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವಹಿಸಿದ್ದರು.