ಕಠ್ಮಂಡು: ಅತ್ಯಂತ ಕಡಿಮೆ ಸಮಯದಲ್ಲಿ ಏಕಾಂಗಿಯಾಗಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ಭಾರತೀಯ ಎನ್ನುವ ದಾಖಲೆ ಸೃಷ್ಟಿಯಾಗಿದೆ.
ವಿಶಾಖಪಟ್ಟಣಂ ಮೂಲದ ಪರ್ವತಾರೋಹಿ ಎಸ್ ವಿ ಎನ್ ಸುರೇಶ್ ಎಂಬುವವರೇ ಈ ವಿಶೇಷ ಸಾಧನೆ ಮಾಡಿದವರು. ಅವರು ಮೌಂಟ್ ಎವರೆಸ್ಟ್ ಶಿಖರ ಏರಲು 4 ದಿನಗಳನ್ನು ತೆಗೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಎವರೆಸ್ಟ್ ಶಿಖರ ಆರೋಹಣಕ್ಕೆ 15- 20 ದಿನಗಳು ತಗುಲುತ್ತವೆ. ಅಂಥದ್ದರಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ ಎವರೆಸ್ಟ್ ಚಾರಣ ಮಾಡಿದ್ದಾರೆ ಸುರೇಶ್.
ಜಿಮ್ ನಲ್ಲಿ ಕಠಿಣ ಅಭ್ಯಾಸ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಪರ್ವತಾರೋಹಣಗಳಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಸುರೇಶ್.