HEALTH TIPS

ತ್ರಿವರ್ಣ ಧ್ವಜಕ್ಕೆ ಅಪಮಾನ; ಅಮೇಜಾನ್ ವಿರುದ್ಧ ಭುಗಿಲೆದ್ದ ಆಕ್ರೋಶ

          ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೇಜಾನ್ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಗಿದ್ದಾರೆ. 

         ಉಡುಪುಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಮುದ್ರಿಸಲಾಗಿದೆ ಕಂಡ ಕಂಡಲ್ಲಿ ಈ ರೀತಿ ತ್ರಿವರ್ಣ ಧ್ವಜದ ಚಿತ್ರವನ್ನು ಮುದ್ರಿಸುವುದು ಅದಕ್ಕೆ ಮಾಡುವ ಅವಮಾನವಷ್ಟೇ ಅಲ್ಲ ಧ್ವಜ ಸಂಹಿತೆಯ ಉಲ್ಲಂಘನೆಯೂ ಹೌದು ಎಂದು ನೆಟ್ಟಿಗರು ಅಮೇಜಾನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

          ಈ ಬಗ್ಗೆ ತಕ್ಷಣವೇ ಎಚ್ಚೆತ್ತು ಹೇಳಿಕೆ ಬಿಡುಗಡೆ ಮಾಡಿರುವ ಅಮೇಜಾನ್, ಅನುವರ್ತನೆಯಿಲ್ಲದ ಉತ್ಪನ್ನಗಳನ್ನು ಮಾರಾಟದ ಸರಕುಗಳ ಪಟ್ಟಿಯಲ್ಲಿ ಸೇರಿಸಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ. 

             ಕೀ ಚೈನ್, ಕಪ್, ಬಟ್ಟೆಗಳು, ಚಾಕೊಲೇಟ್ ಗಳು ಮುಂತಾದವುಗಳ ಮೇಲೆ ತ್ರಿವರ್ಣ ಧ್ವಜದ ಚಿತ್ರವನ್ನು ಮುದ್ರಿಸಲಾಗಿದ್ದ ಫೋಟೋಗಳನ್ನು ನೆಟ್ಟಿಗರು ಹಂಚಿಕೊಂಡಿದ್ದು ಆ ಉತ್ಪನ್ನಗಳನ್ನು ನಿಷೇಧಿಸುವಂತೆ ಕೋರಿದ್ದಾರೆ.

            #AmazonInsultsNationalFlag ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದು, " ಅಮೇಜಾನ್.ಇನ್ ಆನ್ ಲೈನ್ ಮಾರುಕಟ್ಟೆಯಾಗಿದ್ದು, ಮೂರನೇ ವ್ಯಕ್ತಿ ಮಾರಾಟಗಾರರು ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಅಂತಹ ಉತ್ಪನ್ನಗಳ ಸಂಬಂಧ ಅನುಸರಣೆಯನ್ನು ಖಾತ್ರಿಪಡಿಸುವುದು ಅವರದ್ದೇ ಜವಾಬ್ದಾರಿಯಾಗಿರುತ್ತದೆ ಎಂದು ಅಮೇಜಾನ್ ತಿಳಿಸಿದೆ.

             ಅಮೇಜಾನ್ ಗೆ ಅನ್ವಯಿಸುವ ಕಾನೂನುಗಳನ್ನು ಎಲ್ಲಾ ಉತ್ಪನ್ನಗಳಲ್ಲಿಯೂ ಅನುಸರಿಸಬೇಕಾಗುತ್ತದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಮೇಜಾನ್ ಬದ್ಧವಾಗಿದೆ ಎಂದು ಸಂಸ್ಥೆ ತಿಳಿಸಿದೆ. 2017 ರಲ್ಲಿಯೂ ಅಮೇಜಾನ್ ವಿರುದ್ಧ ಇಂಥಹದ್ದೇ ಆರೋಪ ಕೇಳಿಬಂದಿತ್ತು. ಭಾರತದ ಧ್ವಜವಿದ್ದ ಡೋರ್ ಮ್ಯಾಟ್ ಗಳನ್ನು ಕೆನಡಾದ ಅಮೇಜಾನ್ ವೆಬ್ ಸೈಟ್ ನಲ್ಲಿ ಮಾರಾಟಕ್ಕೆ ಇಡಲಾಗಿದ್ದರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries