ಬದಿಯಡ್ಕ: ಕೆ.ಪಿ.ಎಸ್.ಟಿ ಎ (ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಶಿಯೇಶನ್) ಕುಂಬಳೆ ಉಪಜಿಲ್ಲಾ ಮಟ್ಟದ ಸ್ವದೇಶ್ ಮೆಗಾ ಕ್ವಿಜ್ 2022 ಜಿ ಎಚ್ ಎಸ್ ಪೆರಡಾಲ ಶಾಲೆಯಲ್ಲಿ ಜರಗಿತು. ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಂಬಳೆ ಉಪಜಿಲ್ಲಾ ಕೆ. ಪಿ ಎಸ್ ಟಿ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ವಹಿಸಿದ್ದರು. ಕಾರ್ಯಕ್ರಮವನ್ನು ಕೆ.ಪಿ. ಎಸ್.ಟಿ.ಎ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಪ್ರಾಂತ್ಯ ಕೌನ್ಸಿಲರ್ ಯೂಸುಫ್ ಮಾಸ್ತರ್ ಬಹುಮಾನ ವಿತರಿಸಿದರು, ಗೋಪಾಲಕೃಷ್ಣ ಮಾಸ್ತರ್ ಶುಭಾಶಂಸನೆಗೈದರು. ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರಿಗೆ ಫಲಕ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಮಾಸ್ತರ್ ಸ್ವಾಗತಿಸಿ, ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು. ಶರತ್ ಚಂದ್ರ ಶೆಟ್ಟಿ ಶೇಣಿ, ರತೀಶ್ ಮಾಸ್ತರ್ ಸಹಕರಿಸಿದರು.