ಕೊಚ್ಚಿ: ಸಂಗೀತದ ಹೆಜ್ಜೆಗಳ ಬಳಿಕ ಕೊಚ್ಚಿ ಮೆಟ್ರೋ ಪ್ರಯಾಣಿಕರನ್ನು ಸೆಳೆಯುವ ಮತ್ತೊಂದು ಹೊಸ ವ್ಯವಸ್ಥೆಗೆ ಮುಂದಾಗಿದೆ. ಫುಟ್ಬಾಲ್ ಮೊಬೈಲ್ ಚಾಜಿರ್ಂಗ್ ಕಿಯೋಸ್ಕ್ ನ್ನು ಫುಟ್ಬಾಲ್ ಆಟಗಾರ ಐಎಂ ವಿಜಯನ್ ಉದ್ಘಾಟಿಸಿದರು. ಕೊಚ್ಚಿ ಮೆಟ್ರೋದ ಎಂಜಿ ರಸ್ತೆಯಲ್ಲಿರುವ ನಿಲ್ದಾಣದಲ್ಲಿ ಚಾಜಿರ್ಂಗ್ ಸಾಧನವನ್ನು ಅಳವಡಿಸಲಾಗಿದೆ.
ಬಿಡುವಿಲ್ಲದ ಪ್ರಯಾಣದಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ಹರಡಲು ಇಂತಹ ಸಾಧನಗಳು ಸಹಾಯ ಮಾಡುತ್ತವೆ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಇಂತಹ ಚಾರ್ಜಿಂಗ್ ಸಾಧನಗಳು ಸಾಮಾನ್ಯವಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಐಎಂ ವಿಜಯನ್ ಹೇಳಿದರು.
ಕೊಚ್ಚಿ ಮೆಟ್ರೋ ನಿಲ್ದಾಣದಲ್ಲಿ ಮುಂದಿನ ಪೀಳಿಗೆಯ ಚಾರ್ಜಿಂಗ್ ಕಿಯೋಸ್ಕ್ ನ್ನು ಸ್ಥಾಪಿಸಲಾಗಿದ್ದು, ಮೊಬೈಲ್ ಫೆÇೀನ್, ಲ್ಯಾಪ್‍ಟಾಪ್ ಮತ್ತು ಪವರ್ ಬ್ಯಾಂಕ್‍ಗಳನ್ನು ಪೆಡಲ್ ಮಾಡುವ ಮೂಲಕ ಚಾರ್ಜ್ ಮಾಡಬಹುದು.
ಚಾಜಿರ್ಂಗ್ ವ್ಯವಸ್ಥೆಯನ್ನು ಸ್ಮೋಡೋ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ, ಇದು ಸ್ಟಾರ್ಟ್ ಅಪ್ ಆಗಿದೆ. ರೈಡ್ ಆನ್ ಎಂಬ ಈ ವಿನೂತನ ಸಾಧನದಿಂದ ಸಾಮಾನ್ಯ ಶಕ್ತಿಯಷ್ಟೇ ವೇಗದಲ್ಲಿ ಚಾರ್ಜ್ ಮಾಡಬಹುದು. ಕೊಚ್ಚಿ ಮೆಟ್ರೋ ಸಹ ಪ್ರಯಾಣಿಕರಲ್ಲಿ ವ್ಯಾಯಾಮವನ್ನು ಕಲಿಸುವ ಗುರಿಯನ್ನು ಹೊಂದಿದೆ.