ಕುಂಬಳೆ: ಮುಜುಂಗಾವು ವಿದ್ಯಾಪೀಠಕ್ಕೆ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಸ್ಟೀಲ್ ಕಪಾಟು ವಿತರಣೆ ಗುರುವಾರ ನಡೆಯಿತು.
ಎಡನಾಡು ಸೇವಾಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಯಂತ ಪಾಟಾಳಿ ಅವರು ಮುಜುಂಗಾವು ವಿದ್ಯಾಪೀಠದ ಅಧ್ಯಕ್ಷ ಎಸ್.ಎನ್. ರಾವ್ ಮುನ್ನಿಪ್ಪಾಡಿಯವರಿಗೆ ಕೊಡುಗೆಯನ್ನು ಹಸ್ತಾಂತರಿಸಿದರು. ಉದಾರ ಕೊಡುಗೆಯನ್ನು ಸ್ವೀಕರಿಸಿದ ಎಸ್.ಎನ್.ರಾವ್ ಅವರು ಬ್ಯಾಂಕ್ ನ ವಿಶಾಲ ಮನೋಭಾವವನ್ನು ಶ್ಲಾಘಿಸಿದರು.
ಬ್ಯಾಂಕ್ ನಿರ್ದೇಶಕ ರಾಮಭಟ್ ಕಾರಿಂಜ ಹಳೆಮನೆ,ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ,ಉಪಾಧ್ಯಕ್ಷ ಶ್ಯಾಮರಾಜ್ ದೊಡ್ಡಮಾಣಿ, ಮೊದಲಾದವರು ಕೊಡುಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಮಾಡಿದರೆ, ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ನಿರೂಪಿಸಿದರು. ಹತ್ತನೆ ತರಗತಿ ವಿದ್ಯಾರ್ಥಿನಿ ಕು. ಗ್ರೀಷ್ಮಾ ಸ್ವಾಗತಿಸಿ, ಹತ್ತನೆ ತರಗತಿ ಶ್ರವಣಕುಮಾರ ವಂದಿಸಿದರು.