ನವದೆಹಲಿ:ಕೇಂದ್ರವು ಗುರುವಾರ ಗ್ರಾಹಕ ರಕ್ಷಣೆ (ಜಿಲ್ಲಾ,ರಾಜ್ಯ ಮತ್ತು ರಾಷ್ಟ್ರೀಯ ಆಯೋಗಗಳ ಅಧಿಕಾರ ವ್ಯಾಪ್ತಿ) ನಿಯಮಗಳು,2021ನ್ನು ಅಧಿಸೂಚಿಸಿದ್ದು,ಈ ಗ್ರಾಹಕ ನ್ಯಾಯಾಲಯಗಳು ವಿಚಾರಣೆ ನಡೆಸುವ ಗ್ರಾಹಕರ ದೂರುಗಳಲ್ಲಿಯ ಮೊತ್ತವನ್ನು ಹೆಚ್ಚಿಸಲಾಗಿದೆ.

ನೂತನ ನಿಯಮಗಳಡಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳು 50 ಲ.ರೂ.ವರೆಗಿನ ಮೊತ್ತವನ್ನು ಒಳಗೊಂಡಿರುವ ದೂರುಗಳ ವಿಚಾರಣೆಯನ್ನು ನಡೆಸಲು ಸಾಧ್ಯವಾಗಲಿದೆ. ರಾಜ್ಯ ಗ್ರಾಹಕ ನ್ಯಾಯಾಲಯಗಳು 50 ಲ.ರೂ.ನಿಂದ ಎರಡು ಕೋಟಿ.ರೂ ವರೆಗಿನ ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎರಡು ಕೋ.ರೂ.ಮತ್ತು ಹೆಚ್ಚಿನ ಮೊತ್ತವನ್ನು ಒಳಗೊಂಡಿರುವ ದೂರುಗಳ ವಿಚಾರಣೆಯನ್ನು ನಡೆಸಲಿವೆ.
ಈ ಮೊದಲು ಜಿಲ್ಲಾ ಗ್ರಾಹಕ ನ್ಯಾಯಾಲಯಗಳು 20 ಲ.ರೂ.ವರೆಗಿನ,ರಾಜ್ಯ ಗ್ರಾಹಕ ನ್ಯಾಯಾಲಯಗಳು ಒಂದು ಕೋ.ರೂ.ವರೆಗಿನ ಮತ್ತು ರಾಷ್ಟ್ರೀಯ ಆಯೋಗವು 10 ಕೋ.ರೂ.ಗೂ ಅಧಿಕ ಮೊತ್ತವನ್ನು ಒಳಗೊಂಡ ದೂರುಗಳ ವಿಚಾರಣೆ ನಡೆಸುತ್ತಿದ್ದವು.